ಉಳ್ಳಾಲ: ಪ್ರತಿಭಾ ಪುರಸ್ಕಾರ, ಪ್ರಮಾಣ ಪತ್ರ ವಿತರಣೆ
ಉಳ್ಳಾಲ: ಯುವ ಸಮುದಾಯವನ್ನು ನಮ್ಮ ಚೌಕಟ್ಟಿನೊಳಗೆ ಗುರುತಿಸುವ ಕೆಲಸ ಆಗಬೇಕಾಗಿದ್ದು, ಈ ಕೆಲಸ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಮಾಡುತ್ತಿದೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸುವ ಕೆಲಸ ಆಗಬೇಕು ಎಂದು ಹಳೆಕೋಟೆ ಮದನಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಕೆಎಂಕೆ ಮಾಸ್ಟರ್ ಹೇಳಿದರು.
ಅವರು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಉಳ್ಳಾಲ ಸೆಂಟರ್ ಇದರ ಆಶ್ರಯದಲ್ಲಿ ಶುಕ್ರವಾರ ಯುನಿಟಿ ಹಾಲ್ ನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ದಲ್ಲಿ ಮಾತನಾಡಿದರು.
ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣಾ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಭ್ಯಾಸ ಕಡೆ ಒತ್ತು ಕೊಟ್ಟರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ.ಇದಕ್ಕೆ ಪೂರಕ ಕೆಲಸ ನಾವು ಮಾಡಬೇಕು ಎಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಕಣಚೂರು ಪಿಯು ಕಾಲೇಜು ಪ್ರಾಂಶುಪಾಲ ಶಾಹಿದಾ, ಹಳೆಕೋಟೆ ಮದನಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಕೆಎಂಕೆ ಮಾಸ್ಟರ್, ಜಮಾಅತ್ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ಗಫೂರ್, ಅಧ್ಯಕ್ಷ ಅಬ್ದುಲ್ ಕರೀಂ ಮಹಿಳಾ ವಿಭಾಗದ ಸಂಚಾಲಕಿ ಝೀನತ್ ಹಸನ್,ಡಾ.ಝೈನುದ್ದೀನ್,ಜಿಐಒ ಅಧ್ಯಕ್ಷೆ ಫಾತೀಮಾ ನಸೂರ, ಝರೀನ ಬೇಗಂ, ಆಯಿಷಾ ಫರ್ ಹಾ ಮತ್ತಿತರರು ಉಪಸ್ಥಿತರಿದ್ದರು.
ಉಮರ್ ಕಿರಾಅತ್ ಪಠಿಸಿದರು.ಡಾ.ಮುಹಮ್ಮದ್ ಮುಬೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಝಮ್ಮಿಲ್ ಅಹ್ಮದ್ ವಂದಿಸಿದರು.