ಉಳ್ಳಾಲ ತಾಲೂಕು ಮಟ್ಟದ ಗಾಯನ ಸ್ಪರ್ಧೆ
ಮಂಗಳೂರು, ಆ.27: ಸ್ಕೌಟ್ ಮತ್ತು ಗೈಡ್ಸ್ ಉಳ್ಳಾಲ ಇದರ ವತಿಯಿಂದ ತಾಲೂಕು ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯು ಮುನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಸ್ಕೌಟ್ಸ್ ವಿಭಾಗದಲ್ಲಿ ಕೊಣಾಜೆ ಪದವು ಸರಕಾರಿ ಪ್ರೌಢಶಾಲೆ ಪ್ರಥಮ, ಪಾನೀರ್ ಅಸ್ಸಿಸಿ ಸೆಂಟ್ರಲ್ ಶಾಲೆ ದ್ವಿತೀಯ, ಬಬ್ಬುಕಟ್ಟೆ ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆಯಿತು.
ಗೈಡ್ಸ್ ವಿಭಾಗದಲ್ಲಿ ಪಾನೀರ್ ಅಸ್ಸಿಸಿ ಸೆಂಟ್ರಲ್ ಶಾಲೆ ಪ್ರಥಮ, ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ, ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆಯಿತು.
ಕಬ್ ವಿಭಾಗದಲ್ಲಿ ಪರಿಜ್ಞಾನ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯಿತು.
ಬುಲ್ ಬುಲ್ ವಿಭಾಗದಲ್ಲಿ ಸಂತ ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಪಾನೀರ್ ಅಸ್ಸಿಸಿ ಸೆಂಟ್ರಲ್ ಶಾಲೆ ದ್ವಿತೀಯ, ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆಯಿತು.ಪ್ರಥಮ ಸ್ಥಾನ ಪಡೆದ ಸ್ಪರ್ಧಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಜಂಟಿ ಜೊತೆ ಕಾರ್ಯದರ್ಶಿ ಜಯವಂತಿ ಸೋನ್ಸ್, ಉಳ್ಳಾಲ ಘಟಕದ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಮತ್ತು ಲಿಡಿಯಾ ಡಿಸೋಜ, ಪೆರ್ಮನೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಗೀತಾ ಜುಡಿತ್ ಸಲ್ದಾನ. ತೀರ್ಪುಗಾರರಾದ ರೆಹನಾ, ಗೀತಾ ಶೆಟ್ಟಿ, ನೀತಾಗಟ್ಟಿ, ಗೀತಾ ಚಂದ್ರಾವತಿ ಉಪಸ್ಥಿತರಿದ್ದರು.