ಉಳ್ಳಾಲ: ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ವನಮಹೋತ್ಸವ, ವಿದ್ಯಾರ್ಥಿ ಸಂಸತ್ತು ಉದ್ಘಾಟನೆ
ಉಳ್ಳಾಲ:ಪ್ರಕೃತಿಯು ನಮಗಾಗಿ ಕೊಟ್ಟ ವರದಾನವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ದರ್ಗಾ ಅಧ್ಯಕ್ಷ ಬಿ ಜಿ ಹನೀಫ್ ಹಾಜಿ ಹೇಳಿದರು.
ಅವರು ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವನಮಹೋತ್ಸವ, ಶಾಲಾ ವಿದ್ಯಾರ್ಥಿ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತಾಡಿದರು.
ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಯು ಹೆಚ್ ಫಾರೂಕ್ ಅವರು, ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಪಟ್ಟಿ ವಿತರಿಸಿ ಮಾತನಾಡಿ,ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಗಳ ಭಾಗವಹಿಸುವಿಕೆ ಭವಿಷ್ಯದ ಹಾದಿಯಲ್ಲಿ ಸಹಕಾರಿ ಎಂದು ಶುಭ ಹಾರೈಸಿದರು.
ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಕೋರ್ಡಿನೇಟರ್ ಹಾಜಿ ಎಂ. ಹೆಚ್. ಮಲಾರ್ ವಿದ್ಯಾರ್ಥಿಗಳಿಗಾಗಿ ರಚಿಸಿದ ವಿವಿಧ ಸಂಘಗಳ ಅಧ್ಯಕ್ಷ ರಿಗೆ ಸಂಘದ ನಾಮಫಲಕಗಳನ್ನು ನೀಡಿದರು.
ಕಾರ್ಯಕ್ರಮ ದಲ್ಲಿ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್, ಉಳ್ಳಾಲ ಕೇಂದ್ರ ಜುಮಾ ಮಸೀದಿ ಯ ಸದಸ್ಯ ರಫೀಕ್ ಕೋಡಿ, ಅಬೂಬಕ್ಕರ್ ಕೋಟೆಪುರ ಜುಮಾ ಮಸೀದಿ ಯ ಅಧ್ಯಕ್ಷ ಯು.ಕೆ ಅಬ್ಬಾಸ್ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಗೀತಾ ಡಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತಾಡಿದರು.ಬಿ ಎಂ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಣೆ ಮಾಡಿದರು.
ಮೊಹಮ್ಮದ್ ಫಾಝಿಲ್ ಸ್ವಾಗತಿಸಿದರು.ಅಖಿಲ್ ವಂದಿಸಿದರು.