ಉಳ್ಳಾಲ: ಗ್ಲೋರಿಯಸ್ ಇಂಡಿಯಾ ಕಾರ್ಯಕ್ರಮ
ಉಳ್ಳಾಲ: ಗ್ಲೋರಿಯಸ್ ಇಂಡಿಯಾ ಕಾರ್ಯಕ್ರಮ ಉಳ್ಳಾಲ:ಎಸ್ ವೈ ಎಸ್ ಮುಡಿಪು ಝೋನ್ ಇದರ ಆಶ್ರಯದಲ್ಲಿ ಕ್ಯಾಬಿನೆಟ್ ಸರ್ಕಲ್ 23 ಮತ್ತು ಗ್ಲೋರಿಯಸ್ ಇಂಡಿಯಾ ಕಾರ್ಯಕ್ರಮವು ಇತ್ತೀಚೆಗೆ ತಾಜುಲ್ ಉಲಮಾ ಮಹಿಳಾ ಶರಿಅತ್ ಕಾಲೇಜು ಮುಡಿಪು ವಿನಲ್ಲಿ ನಡೆಯಿತು.
ಎಸ್ ವೈ ಎಸ್ ಮುಡಿಪು ಝೋನ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಉಸ್ತಾದರ ನೇತೃತ್ವ ವಹಿಸಿದ್ದರು. ದ.ಕ.ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಮೆಹಬೂಬ್ ಸಖಾಫಿ ಉಸ್ತಾದರು ಉದ್ಘಾಟಿಸಿದರು ಬದುರುದ್ದೀನ್ ಅಝಅರಿ ಉಸ್ತಾದ್ ದುಆ ನೆರವೇರಿಸಿದರು. ಕ್ಯಾಬಿನೆಟ್ ಸರ್ಕಲ್ 23 ಕಾರ್ಯಕ್ರಮ ವನ್ನು ಜಿಲ್ಲಾ ಕಾರ್ಯದರ್ಶಿ ಬದುರುದ್ದೀನ್ ಅಝಅರಿ ಉಸ್ತಾದರು ನಡೆಸಿ ಕೊಟ್ಟರು.
ಕಾರ್ಯಕ್ರಮ ದಲ್ಲಿ ಸಮಾನಿಗೆ ಮುಹಮ್ಮದ್ ಮದನಿ , ಎಸ್ ವೈ ಎಸ್ ಜಿಲ್ಲಾ ನಾಯಕರು ಗಳಾದ ಖಲೀದ್ ಹಾಜಿ ಸಹಿತ 37 ಶಾಖೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಎಂಎಂಕೆ ರಶಾದಿ ಸ್ವಾಗತಿಸಿದರು. ಕಾರ್ಯದರ್ಶಿ ಶರೀಫ್ ಪಾಣೇಲ ವಂದಿಸಿದರು.
Next Story