ಉಳ್ಳಾಲ: ಜಮೀಯತುಲ್ ಫಲಾಹ್ ತಾಲೂಕು ಘಟಕ ಉದ್ಘಾಟನೆ
ಉಳ್ಳಾಲ: ಶಿಕ್ಷಣದಿಂದ ಬಡತನ ನಿರ್ಮೂಲನೆ ಸಾಧ್ಯ, ಆ ನಿಟ್ಟಿನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜಮೀಯ್ಯತುಲ್ ಫಲಾಹ್ ಸಂಸ್ಥೆ ನೀಡಿದ ಕೊಡುಗೆ ಅಪಾರ, ಸಮುದಾಯದ ಅಭಿವೃದ್ಧಿಯಲ್ಲಿ ಸಂಸ್ಥೆ ಅನನ್ಯ ಕೊಡುಗೆ ನೀಡಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಜಮೀಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕದ ಉದ್ಘಾಟನೆ ಮತ್ತು ಒಂಭತ್ತುಕೆರೆ ಟಿಪ್ಪು ಸುಲ್ತಾನ್ ಕಾಲೇಜಿನ ಸಹಯೋಗದಲ್ಲಿ 'ಮಾದಕ ದ್ರವ್ಯ ವಿರುದ್ದ ಹಾಗೂ ಸಂಚಾರ ನಿಯಮಗಳ ಜಾಗೃತಿ ಶಿಬಿರ' ಮಂಗಳವಾರ ಟಿಪ್ಪು ಸುಲ್ತಾನ್ ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಜಮೀಯತ್ತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕಾಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ ಮಾತನಾಡಿ, ಉಳ್ಳಾಲ ತಾಲೂಕು ಆಗಿರುವ ಹಿನ್ನೆಲೆಯಲ್ಲಿ ನೂತನ ಘಟಕ ಅಸ್ತಿತ್ವಕ್ಕೆ ಬಂದಿದ್ದು ಸಂಸ್ಥೆ ಕೈಗೊಳ್ಳುವ ಎಲ್ಲ ಕೆಲಸಗಳಿಗೂ ಪ್ರತಿಯೊಬ್ಬರ ಸಹಕಾರ ನೀಡಿ ಮಾದರಿ ಘಟಕವನ್ನಾಗಿಸಲು ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಸ್ಪೀಕರ್ ಯು.ಟಿ.ಖಾದರ್ ಮತ್ತು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ಕೆಎಂಕೆ ಮಂಜನಾಡಿ ಅವರನ್ನು ಸನ್ಮಾನಿಸಲಾಯಿತು.
ಉಳ್ಳಾಲ ಪೊಲೀಸ್ ಠಾಣಾ ಉಪನಿರೀಕ್ಷಕ ಶೀತಲ್ ಕುಮಾರ್ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಜಮೀಯ್ಯತುಲ್ ಫಲಾಹ್ ಉಡುಪಿ ಮತ್ತು ದ.ಕ.ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಪ್ರಧಾನ ಕಾರ್ಯದರ್ಶಿ ಖಾಸಿಂ ಬಾರ್ಕೂರು, ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಹಮ್ಮದ್ ಬಪ್ಪಳಿಕೆ, ಟಿಪ್ಪು ಸುಲ್ತಾನ್ ಪದವಿ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ರಹಿಮಾನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪವಿತ್ರ ರೈ, ಜಮೀಯ್ಯತುಲ್ ಫಲಾಹ್ ತಾಲೂಕು ಪತ್ರಿಕಾ ಕಾರ್ಯದರ್ಶಿ ಅಹ್ಮದ್ ಕುಂಞಿ ಮಾಸ್ಟರ್, ಸಂಘಟನಾ ಕಾರ್ಯದರ್ಶಿ ಎ.ಕೆ.ರಹ್ಮಾನ್, ಸದಸ್ಯರಾದ ಅಬ್ಬಾಸ್ ಉಚ್ಚಿಲ್, ಹಸನ್ ಕುಂಞಿ, ವಿ.ಕೆ ಇಬ್ರಾಹಿಂ , ನಾಸೀರ್ ಸಾಮಾನಿಗೆ, ಇಕ್ಬಾಲ್ ಸಾಮಾನಿಗೆ, ಆಸಿಫ್ ನಡುಪದವು, ಅಶ್ರಫ್ ಕುರ್ನಾಡು, ಸಿ.ಎಂ.ಶರೀಫ್ ಪಟ್ಟೋರಿ, ರಫೀಕ್ ಕೋಡಿಜಾಲ್, ಅಬ್ದುಲ್ ಖಾದರ್ ಕೋಡಿಜಾಲ್, ಕೊಣಾಜೆ ಗ್ರೀನ್ ವ್ಯೂವ್ ಶಾಲೆಯ ಸಂಚಾಲಕ ಫರ್ವೀಝ್ ಆಲಿ, ವಿದೇಶಿ ಘಟಕದ ಪ್ರತಿನಿಧಿ ಮೊಯಿದ್ದೀನ್ ಅಹ್ಮದ್, ವ್ಯವಸ್ಥಾಪಕ ಆದಂ ಬ್ಯಾರಿ ಮೊದಲಾದವರು ಉಪಸ್ಥಿತರಿದ್ದರು.
ಜಮೀಯ್ಯತುಲ್ ಫಲಾಹ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೋಡಿಜಾಲ್ ಸ್ವಾಗತಿಸಿದರು. ಉಪಾಧ್ಯಕ್ಷ ಕೆಎಂಕೆ ಮಂಜನಾಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಎಂ.ಎಚ್.ಮಲಾರ್ ವಂದಿಸಿದರು.
ಅಬ್ದುಲ್ ರಹ್ಮಾನ್ ಕೋಡಿಜಾಲ್ ಕಾರ್ಯಕ್ರಮ ನಿರೂಪಿಸಿದರು.