ಉಮ್ರಾ ಯಾತ್ರಿಕ ಅಬ್ದುಲ್ ಹಮೀದ್ ನಿಧನ
ಮಂಗಳೂರು, ಅ.2: ಮಲಾರ್ ಹರೇಕಳದ ನಿವಾಸಿ ಅಬ್ದುಲ್ ಹಮೀದ್ (68) ಎಂಬವರು ಸೋಮವಾರ ರಾತ್ರಿ ಮದೀನಾದ ಆಸ್ಪತ್ರೆಯಲ್ಲಿ ನಿಧನರಾದರು.
ಸೆ.20ಕ್ಕೆ ಪತ್ನಿಯೊಂದಿಗೆ ಉಮ್ರಾ ಯಾತ್ರೆಗೈದಿದ್ದ ಹಮೀದ್ ಅವರು ಮಂಗಳವಾರ ಮದೀನಾದಿಂದ ಊರಿಗೆ ಮರಳುವವರಿದ್ದರು. ಉಸಿರಾಟದ ತೊಂದರೆಗೀಡಾಗಿ ತೀವ್ರ ಅಸ್ವಸ್ಥಗೊಂಡ ಅವರನ್ನು ನಾಲ್ಕು ದಿನದ ಹಿಂದೆ ಮದೀನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಅಬ್ದುಲ್ ಹಮೀದ್ ಕೊನೆಯುಸಿರೆಳೆದಿದ್ದಾರೆ.
ಮೃತರ ಅಂತ್ಯಕ್ರಿಯೆಯು ಮದೀನಾದಲ್ಲೇ ನೆರವೇರಿಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಮಲಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್‌ನ ಮಾಜಿ ಕೋಶಾಧಿಕಾರಿಯಾಗಿದ್ದ ಅವರು ಸ್ಥಳೀಯವಾಗಿ ಬೀಡಿ ಹಮಿದಾಕ ಎಂದು ಗುರುತಿಸಲ್ಪಟ್ಟಿದ್ದರು.
Next Story