ಅನಧಿಕೃತ ಬ್ಯಾನರ್ ಅಳವಡಿಕೆ: ಪ್ರಕರಣ ದಾಖಲು
ಮಂಗಳೂರು, ಆ.29: ನಗರದ ಪಡೀಲ್ ಸಮೀಪ ಮಂಗಳೂರು ಮಹಾನಗರಪಾಲಿಕೆಯ ಅನುಮತಿ ಪಡೆಯದೆ ಅನಧಿಕೃತ ವಾಗಿ ಬ್ಯಾನರ್ ಅಳವಡಿಕೆ ಮಾಡಿದ ಆರೋಪದ ಮೇರೆಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
‘ಮೊಸರು ಕುಡಿಕೆಯ ಪ್ರಯುಕ್ತ ಬನ್ನೂರು ಕುರಿ ಮಾಂಸ ಸಿಗುತ್ತದೆ, ಸ್ಥಳ: ಪಡೀಲ್ ರೈಲ್ವೆ ಗೇಟ್ ಹತ್ತಿರ’ ಎಂಬ ಬ್ಯಾನರನ್ನು ಅಪರಿಚಿತ ವ್ಯಕ್ತಿಗಳು ಅನಧಿಕೃತವಾಗಿ ಬಜಾಲ್ ಕ್ರಾಸ್ನಲ್ಲಿ ಪಾಳುಬಿದ್ದಿರುವ ಗೂಡಂಗಡಿಗೆ, ಬಜಾಲ್ ರೈಲ್ವೆ ಅಂಡರ್ಪಾಸ್ ಬಳಿ ದರ್ಬಾರ್ ಹಿಲ್ ಕಡೆಗೆ ಹೋಗುವ ರಸ್ತೆಯ ಬಳಿ ವಿದ್ಯುತ್ ಕಂಬಕ್ಕೆ, ಫೈಸಲ್ನಗರಕ್ಕೆ ಹೋಗುವ ಕ್ರಾಸ್ ರೋಡ್ನ ಬಳಿ ಪಾಳು ಬಿದ್ದಿರುವ ಗೂಡಂಗಡಿಗೆ ಹಾಗೂ ವೀರನಗರ ಕೃಷ್ಣ ಭಜನಾ ಮಂದಿರದ ಬಸ್ ತಂಗುದಾಣಕ್ಕೆ ಕಟ್ಟಿ ಸಾರ್ವಜನಿಕ ಸ್ಥಳದ ಮೂಲ ಸ್ವರೂಪವನ್ನು ವಿರೂಪಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
Next Story