ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ವತಿಯಿಂದ ವನಮಹೋತ್ಸವ
ದೇರಳಕಟ್ಟೆ : ಉತ್ತಮ ಮಳೆ , ತಂಪಾದ ವಾತಾವರಣ ನಿರ್ಮಾಣ ಪರಿಸರ ಸಂರಕ್ಷಣೆಯಿಂದ ಮಾತ್ರ ಸಾಧ್ಯ.ಒಟ್ಟಿನಲ್ಲಿ ನಾವು ಗಿಡಗಳನ್ನು ನೆಡುವ ಮೂಲಕ ಪರಿಸರ ಉಳಿಸುವ ಕಾರ್ಯ ಮಾಡಬೇಕು. ಪರಿಸರ ಸಂರಕ್ಷಣೆ ನಮ್ಮ ಧ್ಯೇಯ ವಾಕ್ಯ ಆಗಿರಬೇಕು ಎಂದು ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಅಧ್ಯಕ್ಷ ಹಾಸೀಮ್ ಬಂಡಸಾಲೆ ಹೇಳಿದರು.
ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ವತಿಯಿಂದ ನಾಟೆಕಲ್ ನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕುನಿಲ್ ಸ್ಕೂಲ್ ವೈಸ್ ಚಯರ್ ಮ್ಯಾನ್ ಮೊಯ್ದಿನ್ ಕುಂಞಿ ಪರಿಸರ ಮತ್ತು ವನಮಹೋತ್ಸವದ ಮಹತ್ವವನ್ನು ವಿವರಿಸಿ, ಪರಿಸರ ಉಳಿಸುವ ಗಿಡ ನೆಡುವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು.
ಹುಬ್ಬಳ್ಳಿ ಇಕ್ಬಾಲ್ , ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸರೋಜಿನಿ, ಸದಸ್ಯ ಅಬ್ಬಾಸ್ ಮಾತನಾಡಿ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಟೆಕಲ್ ತಾಲೂಕು ಕಚೇರಿಯಿಂದ ಅಸೈ ಮಸೀದಿವರೆಗೆ ಸಾಲಾಗಿ ಗಿಡಗಳನ್ನು ನೆಡಲಾಯಿತು. ಶಾಲಿಮಾರ್ ಬಸ್ ಮಾಲಕ ಅಬ್ದುಲ್ ರಝಾಕ್ , ಅಶ್ರಫ್ ಗರಡಿ, ಮಂಜನಾಡಿ ಗ್ರಾಮ ಪಂಚಾಯತ್ ಸಿಬ್ಬಂದಿ ಶಾಹುಲ್ ಹಮೀದ್ ಉಪಸ್ಥಿತರಿದ್ದರು.