ಮೀಫ್ ನಿಯೋಗದಿಂದ ಸಚಿವ ಝಮೀರ್ ಅಹ್ಮದ್ ರ ಭೇಟಿ, ಮನವಿ ಸಲ್ಲಿಕೆ
ಮಂಗಳೂರು, ಸೆ.6: ಮುಸ್ಲಿಮ್ ಎಜುಕೇಶನಲ್ ಇನ್ ಸ್ಟಿಟ್ಯೂಶನ್ಸ್ ಫೆಡರೇಶನ್ (MEIF) ನಿಯೋಗವು ರಾಜ್ಯ ವಸತಿ, ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಅವರನ್ನು ಭೇಟಿಯಾಗಿ ಮೀಫ್ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಮತ್ತು ಸಮಗ್ರ ಅಭಿವೃದ್ಧಿಗಾಗಿ 200 ಕೋಟಿ ರೂ. ಮಂಜೂರು ಮಾಡಲು ಹಾಗೂ ಮೀಫ್ ಕಾರ್ಯಚಟುವಟಿಕೆಗಾಗಿ ಭೂಮಿಯನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿತು.
ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು, ಮೀಫ್ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.
MEIF ಅಧ್ಯಕ್ಷ ಮೂಸಬ್ಬ ಬ್ಯಾರಿ ನೇತೃತ್ವದ ನಿಯೋಗದಲ್ಲಿ ಉಪಾಧ್ಯಕ್ಷ ಮುಸ್ತಫ ಸುಳ್ಯ, ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ., ಕಾರ್ಯದರ್ಶಿಗಳಾದ ಅನ್ವರ್ ಹುಸೈನ್, ಶಾರಿಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುರ್ರಝಾಕ್ ಗೋಳ್ತಮಜಲು, ಪರ್ವೇಝ್ ಅಲಿ, ಶೈಖ್ ರಹ್ಮತುಲ್ಲಾ, ಬಿ.ಎ.ಇಕ್ಬಾಲ್ ಉಪಸ್ಥಿತರಿದ್ದರು.
ಈ ಸಂದರ್ಭ ಜಿ.ಎ.ಬಾವ ಮತ್ತು ಯು.ಟಿ.ಇಫ್ತಿಕಾರ್ ಹಾಜರಿದ್ದರು.
Next Story