ವಿಟ್ಲ: ವ್ಯಕ್ತಿ ಆತ್ಮಹತ್ಯೆ
ವಿಟ್ಲ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಮುಳಿಯ ತಾಳಿಪಡ್ಪು ನಿವಾಸಿ ಲಾರಿ ಚಾಲಕ ಲಿಯೋ ಡಿಸೋಜ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಅವಿವಾಹಿತರಾಗಿದ್ದ ಲಿಯೋ ತನ್ನ ಅಣ್ಣನ ಜೊತೆ ವಾಸವಿದ್ದರು. ಕಳೆದ ರಾತ್ರಿ ಊಟದ ಬಳಿಕ ಕೋಣೆಗೆ ತೆರಳಿದ್ದ ಲಿಯೋ ಬಾಗಿಲು ತೆರೆಯದೇ ಇರುವ ಕಾರಣ ಒಳಗೆ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Next Story