ಮಹಿಳಾ ಸುರಕ್ಷತೆ ಖಾತ್ರಿ ಪಡಿಸಲು ಅಗ್ರಹಿಸಿ ವಿಮ್ ಪ್ರತಿಭಟನೆ
ಮಂಗಳೂರು : ಮಹಿಳಾ ಸುರಕ್ಷತೆ - ಸಾಮೂಹಿಕ ಜವಾಬ್ದಾರಿ ರಾಷ್ಟ್ರೀಯ ಅಭಿಯಾನದ ಅಂಗವಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಸೋಮವಾರ ನಗರದ ರಾಜಾಜಿ ಪಾರ್ಕ್ ಬಳಿ ಮಹಿಳಾ ಸುರಕ್ಷತೆ ಖಾತ್ರಿ ಪಡಿಸಲು ಅಗ್ರಹಿಸಿ ಪ್ರತಿಭಟನೆ ನಡೆಯಿತು. ಧಾರಾಕಾರವಾಗಿ ಸುರಿಯುತ್ತಿರುವ ಸಿಡಿಲು, ಮಳೆಯನ್ನು ಲೆಕ್ಕಿಸದೆ ಮಹಿಳೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭ ವಿಮ್ ಜಿಲ್ಲಾ ಅಧ್ಯಕ್ಷೆ ನೌರೀನ್ ಆಲಂಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಶಾ ವಾಮಂಜೂರು, ಉಪಾಧ್ಯಕ್ಷೆ ಝಾಹನ, ಜೊತೆ ಕಾರ್ಯದರ್ಶಿ ಅಜ್ಮಿನಾ ಕಾಟಿಪಳ್ಳ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷೆ ನಸೀಮಾ ರಶೀದ್, ಮೂಡಬಿದ್ರೆ ಕ್ಷೇತ್ರದ ಅಧ್ಯಕ್ಷೆ ಫೌಝಿಯಾ, ಕಾರ್ಯದರ್ಶಿ ಜೀನತ್, ಮಂಗಳೂರು ಕ್ಷೇತ್ರ ( ಉಳ್ಳಾಲ) ಅಧ್ಯಕ್ಷೆ ಶಬ್ರಿನಾ , ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷೆ ರೇಷ್ಮಾ ಪಾಂಡೇಶ್ವರ, ಕಾರ್ಯದರ್ಶಿ ಸಬೀನಾ ಹಾಗೂ ಶಮೀಮ ತುಂಬೆ, ಝಾಹಿದ ಸಾಗರ್,ನಸೀಮಾ ಮೂಡಬಿದ್ರೆ ಉಪಸ್ಥಿತರಿದ್ದರು.
Next Story