ಸಂಶೋಧನೆಯಲ್ಲಿ ಬರವಣಿಗೆ, ಭಾಷಾ ಸಾಹಿತ್ಯವೂ ಪರಿಣಾಮಕಾರಿ: ಡಾ.ಸುಚರಿತ ಸುರೇಶ್
ಕೊಣಾಜೆ: ವೈಜ್ಞಾನಿಕ ಕ್ಷೇತ್ರ ಸೇರಿದಂತೆ ಪ್ರತೀ ಸಂಶೋಧನಾ ಕ್ಷೇತ್ರದಲ್ಲಿ ಸಂಶೋಧನೆಯ ಅಡಿಪಾಯ ನಮ್ಮ ಬರವಣಿಗೆ ಮತ್ತು ಭಾಷೆ. ಸಂಶೋಧನೆಯ ಸಂದರ್ಭದಲ್ಲಿ ನಾವು ಮಂಡಿಸುವ ವಿಚಾರಗಳಲ್ಲಿ ಬಳಸುವ ಸಾಹಿತ್ಯ ಪರಿಣಾಮಕಾರಿಯಾಗಿ ಪ್ರಸ್ತುತಗೊಂಡರೆ ಸಂಶೋಧನೆ ಯಶಸ್ಸುಗೊಳ್ಳಲು ಸಾಧ್ಯ ಎಂದು ಫಾ.ಮುಲ್ಲರ್ ವೈದ್ಯಕೀಯ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸುಚರಿತ ಸುರೇಶ್ ಅಭಿಪ್ರಾಯಪಟ್ಟರು.
ಕಣಚೂರು ಹಾಸ್ಪಿಟಲ್ ಎಂಡ್ ರಿಸರ್ಚ್ ಸೆಂಟರ್ ಸಭಾಂಗಣದಲ್ಲಿ ಕಣಚೂರು ಕಾಲೇಜ್ ಆಫ ನರ್ಸಿಂಗ್ ಸೈನ್ಸಸ್ ಆಶ್ರಯದಲ್ಲಿ ನಡೆದ ಸಂಶೋದನೆಯ ಅಡಿಪಾಯದಲ್ಲಿ ಸಾಹಿತ್ಯದ ನೋಟ ಈ ವಿಚಾರದಲ್ಲಿ ನಡೆದ ರಾಷ್ಟ್ರ ಮಟ್ಟದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರತೀ ಸಂಶೋಧನೆಯನ್ನು ನಡೆಸುವ ಸಂಶೋಧಾನಾರ್ಥಿ ಮೂರು ಸಂಶೋಧನಾ ವಿಷಯಗಳನ್ನು ಆಯ್ಕೆಗಾಗಿ ನೀಡು ತ್ತಾರೆ. ಈ ಸಂದರ್ಭಲ್ಲಿ ಸಂಶೋಧನೆಯ ಮೂಲ ಉದ್ದೇಶ, ಅದರ ವಿವರವನ್ನು ತನಗೆ ಮಾರ್ಗದರ್ಶನ ಮಾಡುವವರಿಗೆ ನೀಡುವ ಸಂದರ್ಭದಲ್ಲಿ ನಾವು ಬಳಸುವ ಭಾಷೆಗಳು, ಸಾಹಿತ್ಯ ಇಡೀ ಸಂಶೋಧನೆಯ ಚಿತ್ರಣವನ್ನು ನೀಡುವಂತಿರ ಬೇಕು. ಸಂಶೋಧನೆಯ ಪೀಠಿಕೆ, ಉದ್ಧೇಶ ಸೇರಿದಂತೆ ಮೊದಲು ಮೂರು ಹಂತ ನಾವು ಮಂಡಿಸುವ ಬರವಣಿಗೆಯಲ್ಲಿ ಸ್ಪಷ್ಟವಾಗಿದ್ದರೆ ಮಾತ್ರ ಆ ಸಂಶೋಧನೆ ಯಶಸ್ಸು ಆಗಲು ಮತ್ತು ಅರ್ಥವತ್ತಾಗಿ ಮೂಡಿಸಲು ಸಾದ್ಯ, ವಿದ್ಯಾರ್ಥಿಗಳು ಸಂಶೋಧನೆಯ ಸಂದರ್ಭದಲ್ಲಿ ಮತ್ತು ನಾವು ಬರೆಡಯುವ ಲೇಖನಗಳು ಪರಿಣಾಮಕಾರಿಯಾಗಿ ಮೂಡಬೇಕಾದರೆ ಭಾಷಾ ಜ್ಞಾನದೊಂದಿಗೆ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಯು. ಕಣಚೂರು ಮೋನು ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಸಂದರ್ಭದಲ್ಲಿ ನಡೆಸು ಅಧ್ಯಯನದೊಂದಿಗೆ ಸಂಶೋಧನೆಗೂ ಹೆಚ್ಚು ಒತ್ತು ನೀಡ ಬೇಕು ಎಂದರು.
ಕಾರ್ಯಕ್ರಮದಲ್ಲಿ ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಅಬ್ದುಲ್ ರಹೆಮಾನ್, ಕಣಚೂರು ಆರೋಗ್ಯ ವಿಜ್ಞಾನ ಮತ್ತು ಸಲಹಾ ಸಮಿತಿ ಅಧ್ಯಕ್ಷ ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ಡೀನ್ ಡಾ. ರತ್ನಾಕರ್ ಯು.ಪಿ., ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಡಾ. ಹರೀಶ್ ಶೆಟ್ಟಿ, ಮುಖ್ಯ ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು.
ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಪ್ರಾಂಶುಪಾಲೆ ಪ್ರೊ. ಮೋಲಿ ಸಲ್ದಾನ ಸ್ವಾಗತಿಸಿದರು. ಉಪ ಪ್ರಾಂಶು ಪಾಲೆ ಪ್ರೊ.ಶೆರಿನ್ ಜೋಸೆಫ್ ಪ್ರಸ್ತಾಪನೆಗೈದರು. ಸಹ ಪ್ರಾಧ್ಯಾಪಕಿ ನೀತಾ ಮೀನಾ ಕುವೆಲ್ಲೂ ಮಾಹಿತಿ ನೀಡಿದರು. ಉಪನ್ಯಾಸಕಿ ಸುಜಲಾ ಜೆ. ಕಾರ್ಯಕ್ರಮ ನಿರ್ವಹಿಸಿದರು. ಶಾಲಿನಿ ನೊರೊನ್ಹಾ ವಂದಿಸಿದರು.