ಯೆನೆಪೋಯ: ಪ್ರಕೃತಿ ಚಿಕಿತ್ಸೆ ದಿನದ ಅಂಗವಾಗಿ ಬೀದಿನಾಟಕ
ಮಂಗಳೂರು: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳಿಂದ 6ನೇ ರಾಷ್ಟೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ ಅಂಗವಾಗಿ ನಾಟೆಕಲ್ ಬಸ್ ನಿಲ್ದಾಣದ ಬಳಿ ಬೀದಿನಾಟಕ ಆಯೋಜಿಸಲಾಗಿತ್ತು.
ಜನರಿಗೆ ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ನಾಟಕದ ಮೂಲಕ ಅರಿವು ಮೂಡಿಸಲಾಯಿತು.
ಪ್ರಕೃತಿಯಲ್ಲಿ ಸಿಗುವಂತಹ ಆಹಾರದ ಪ್ರಾಮುಖ್ಯತೆ ತಿಳಿಸಲಾಯಿತು. ದಿನನಿತ್ಯ ಯೋಗಾಭ್ಯಾಸ ಮಾಡುವುದರ ಮೂಲಕ ಉತ್ತಮ ಆರೋಗ್ಯಕ್ಕೆ ಸಹಾಯವಾಗುತ್ತದೆ. ‘ಪ್ರಕೃತಿಯೇ ಚಿಕಿತ್ಸೆಗೆ’ ಎಂಬ ಎಂಬ ಸ್ಲೋಗನ್ ಮೂಲಕ ಬೀದಿನಾಟಕ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಯೆನೆಪೋಯದ ಶಿಬಿರಾಧಿಕಾರಿ ರಝಾಕ್ ಮಂಜನಾಡಿ ಪಂಚಾಯತ್ ಅಧ್ಯಕ್ಷೆ ಸರೋಜಿನಿ ಹಾಗೂ ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವೈದ್ಯಾಧಿಕಾರಿಗಳಾದ ಡಾ. ಶಗುಪ್ತ, ಡಾ. ಅರ್ಪಿತ್ ಕುಮಾರ್ ಮತ್ತು ಅಜಿತ್ ಉಪಸ್ಥಿತರಿದ್ದರು.
Next Story