Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಹಜ್‍ಯಾತ್ರೆ-2024 | ಕೇಂದ್ರ ಸರಕಾರದ...

ಹಜ್‍ಯಾತ್ರೆ-2024 | ಕೇಂದ್ರ ಸರಕಾರದ ವಿಳಂಬದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಟೂರ್ ಆಪರೇಟರ್ ಗಳು

-ಅಮ್ಜದ್ ಖಾನ್ ಎಂ.-ಅಮ್ಜದ್ ಖಾನ್ ಎಂ.9 April 2024 5:37 PM IST
share
ಹಜ್‍ಯಾತ್ರೆ-2024 | ಕೇಂದ್ರ ಸರಕಾರದ ವಿಳಂಬದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಟೂರ್ ಆಪರೇಟರ್ ಗಳು

ಬೆಂಗಳೂರು: ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯ ವಿಳಂಬ ಧೋರಣೆಯಿಂದಾಗಿ ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಿಂದ ಖಾಸಗಿ ಟೂರ್ ಆಪರೇಟರ್ಸ್‍ಗಳ ಮೂಲಕ ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಮುಂದಾಗಿರುವ ಯಾತ್ರಿಗಳಿಗೆ ವಿಐಪಿ ಸೌಲಭ್ಯ ಕಲ್ಪಿಸುವುದು ಖಾಸಗಿ ಟೂರ್ ಆಪರೇಟರ್ಸ್‍ಗಳಿಗೆ ಸವಾಲಾಗಿ ಪರಿಣಮಿಸಿದೆ.

ಮಕ್ಕಾ ನಗರದ ಮೀನಾ ಬಳಿ ಖಾಸಗಿ ಟೂರ್ ಆಪರೇಟರ್ ಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸೌದಿ ಅರೇಬಿಯಾ ಸರಕಾರವು ಟೆಂಟ್‍ಗಳನ್ನು ಕಲ್ಪಿಸುತ್ತದೆ. ಇದು ಹಜ್ ಸಂದರ್ಭದಲ್ಲಿ ಸಾಮಾನ್ಯವಾಗಿ ನಡೆಯುವಂತಹ ಪ್ರಕ್ರಿಯೆ. ಇದಕ್ಕಾಗಿ ಅಂತರ್‍ರಾಷ್ಟ್ರೀಯ ಬ್ಯಾಂಕ್ ಖಾತೆ ಸಂಖ್ಯೆ(ಐಬಾನ್)ಯಲ್ಲಿ ಟೂರ್ ಆಪರೇಟರ್ ಗಳು ಹಣವನ್ನು ವರ್ಗಾವಣೆ ಮಾಡಿ, ಅದರ ಮೂಲಕವೇ ಟೆಂಟ್, ಸಾರಿಗೆ ಸೇರಿದಂತೆ ಇತರೆ ವೆಚ್ಚಗಳನ್ನು ಭರಿಸುತ್ತಿದ್ದರು.

ಆದರೆ, ಈ ಬಾರಿ ಸೌದಿ ಅರೇಬಿಯಾ ಸರಕಾರವು ಹೊಸ ಕಾನೂನು ಮಾಡಿ, ಎಲ್ಲ ದೇಶಗಳ ಖಾಸಗಿ ಟೂರ್ ಆಪರೇಟರ್‍ಗಳು ಹಣವನ್ನು ಐಬಾನ್ ಖಾತೆಗೆ ಜಮೆ ಮಾಡದೆ, ಮಕ್ಕಾದಲ್ಲಿರುವ ತಮ್ಮ ತಮ್ಮ ದೇಶದ ಹಜ್ ಸಂಬಂಧಿತ ಸರಕಾರಿ ಮಿಷನ್‍ಗಳ ಖಾತೆಗೆ ಹಣ ಜಮೆ ಮಾಡಬೇಕು. ಅದೇ ರೀತಿ ಭಾರತದ ಖಾಸಗಿ ಟೂರ್ ಆಪರೇಟರ್ ಗಳು ಇಂಡಿಯನ್ ಹಜ್ ಮಿಷನ್ ಖಾತೆಗೆ ಹಣ ಜಮೆ ಮಾಡುವಂತೆ ಸೂಚಿಸಿದೆ.

ಇಂಡಿಯನ್ ಹಜ್ ಮಿಷನ್ ನವರು ಹಣ ಜಮೆ ಮಾಡಿಸಿಕೊಂಡು ಖಾಸಗಿ ಟೂರ್ ಆಪರೇಟರ್ ಗಳಿಗೆ ಖಾತೆ ಸಂಖ್ಯೆಯನ್ನು ನೀಡಲಿದ್ದಾರೆ. ಅದನ್ನು ಬಳಸಿಕೊಂಡೆ ಅವರು ಎಲ್ಲ ವ್ಯವಹಾರಗಳನ್ನು ಮಾಡಬೇಕಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಯುಎಇ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಇತರೆ ದೇಶಗಳ ಹಜ್ ಸಚಿವಾಲಯಗಳು ಅಲ್ಲಿನ ಖಾಸಗಿ ಟೂರ್ ಆಪರೇಟರ್ ಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಅವರ ಹಣವನ್ನು ಜಮೆ ಮಾಡಿಸಿಕೊಂಡು, ಖಾತೆ ಸಂಖ್ಯೆಗಳನ್ನು ನೀಡಿವೆ.

ಇದರಿಂದಾಗಿ, ಆ ದೇಶಗಳು ಭಾರತದ ಖಾಸಗಿ ಟೂರ್ ಆಪರೇಟರ್ ಗಳು ಈ ಹಿಂದೆ ವಿಐಪಿ ಟೆಂಟ್‍ಗಳ ಅಳವಡಿಕೆಗೆ ಪಡೆದುಕೊಳ್ಳುತ್ತಿದ್ದ ಜಾಗಗಳನ್ನು ಪಡೆದುಕೊಂಡು ಅವರ ದೇಶದ ಯಾತ್ರಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧತೆಗಳನ್ನು ಆರಂಭಿಸಿವೆ. ಆದರೆ, ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದಿಂದ ಈವರೆಗೆ ಖಾಸಗಿ ಟೂರ್ ಆಪರೇಟರ್ ಗಳು ಹಣ ಜಮೆ ಮಾಡಲು ಅವಕಾಶ ಕೊಟ್ಟಿಲ್ಲ.

ಕೆಲವು ಖಾಸಗಿ ಟೂರ್ ಆಪರೇಟರ್ ಗಳು ಹಳೆಯ ಐಬಾನ್ ಖಾತೆಗೆ ಹಣ ಕಳುಹಿಸಿದ್ದಾರೆ. ಆದರೆ ಹಣ ಖಾತೆಗೂ ಹೋಗದೆ ಇವರಿಗೂ ವಾಪಸ್ ಬರದೆ ಸಿಕ್ಕಿಹಾಕಿಕೊಂಡಿದೆ. ಯಾತ್ರಿಗಳಿಗೆ ಮಾತು ಕೊಟ್ಟಿರುವಂತೆ ಮೀನಾದಲ್ಲಿ ವಿಐಪಿ ಟೆಂಟ್‍ಗಳನ್ನು ಕಲ್ಪಿಸಿಕೊಡಲು ಸಾಧ್ಯವಾಗದೆ ಇದ್ದರೆ ಖಾಸಗಿ ಟೂರ್ ಆಪರೇಟರ್ ಗಳು ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಸರಕಾರದ ವಿಳಂಬದಿಂದಾಗಿ ದೇಶದ ಪ್ರತಿಷ್ಠಿತ ಟೂರ್ ಆಪರೇಟರ್ ಗಳು ಸಹ ಯಾತ್ರಿಗಳಿಂದ ಅಪಮಾನ ಎದುರಿಸಬೇಕಾಗಬಹುದು.‌ ಅಲ್ಲದೆ , ಕಳೆದ ವರ್ಷವೂ ಕೇಂದ್ರ ಸರಕಾರದ ವಿಳಂಬ ನೀತಿಯಿಂದಾಗಿ ಹಜ್‌ ಆಪರೇಟರ್‌ಗಳು ಹಜ್‌ ಯಾತ್ರಿಕರು ಸಮಸ್ಯೆಗಳನ್ನು ಎದುರಿಸಿದ್ದರು.

"ಇಡೀ ದೇಶದಲ್ಲಿ ಖಾಸಗಿ ಟೂರ್ ಆಪರೇಟರ್ ಗಳು ಈ ನೂತನ ನಿಯಮದಿಂದ ಸಮಸ್ಯೆ ಎದುರಿಸುವಂತಾಗಿದೆ. ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದಿಂದ ನಿರ್ದೇಶನ ಹೋಗದೆ ಇಂಡಿಯನ್ ಹಜ್ ಮಿಷನ್‍ನವರು ಯಾವುದೆ ಕೆಲಸ ಮಾಡುವುದಿಲ್ಲ. ಈಗಾಗಲೆ ಹಲವಾರು ಮಂದಿ ಟೂರ್ ಆಪರೇಟರ್ ಗಳು ಇಮೇಲ್ ಮೂಲಕ ತಮ್ಮ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದಾರೆ. ಆದರೆ, ಕೇಂದ್ರ ಸರಕಾರದಿಂದ ಯಾವುದೆ ಪ್ರತಿಕ್ರಿಯ ಬಂದಿಲ್ಲ"

"ರಮಝಾನ್ ಹಬ್ಬದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಸರಕಾರಿ ಕಚೇರಿಗಳೆಲ್ಲ ಬಂದ್ ಆಗಿವೆ. ಸೋಮವಾರದಿಂದ ಬಹುಷಃ ಕಚೇರಿಗಳು ಆರಂಭವಾಗಲಿವೆ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಈ ವಿಚಾರದಲ್ಲಿ ನಮ್ಮ ನೆರವಿಗೆ ಬಾರದೆ ಹೋದರೆ ಪರಿಸ್ಥಿತಿ ಬಿಗಡಾಯಿಸಬಹುದು. ಈ ಬಾರಿ ನಮಗೆ ತ್ವರಿತವಾಗಿ ಪ್ರಮಾಣ ಪತ್ರಗಳು ಸಿಕ್ಕಿದ್ದರಿಂದ ನಾವು ಸಂತೋಷವಾಗಿದ್ದೆವು. ಆದರೆ, ಈಗ ಹಣ ಪಾವತಿ ವಿಚಾರದಲ್ಲಿ ಬಂದು ಸಿಕ್ಕಿ ಹಾಕಿಕೊಂಡಿದ್ದೇವೆ"

"ಸಾಮಾನ್ಯವಾಗಿ ಶವ್ವಾಲ್ ತಿಂಗಳ 20ನೇ ತಾರೀಖಿನಿಂದ ಹಜ್ ಯಾತ್ರೆಯ ವೀಸಾ ನೀಡುವ ಪ್ರಕ್ರಿಯೆ ಆರಂಭಿಸಲಾಗುತ್ತಿತ್ತು. ಆದರೆ, ಈ ಬಾರಿ ರಮಝಾನ್ ಮಾಸದ 10ನೇ ತಾರೀಖಿನಿಂದಲೆ ಆರಂಭ ಮಾಡಿದ್ದಾರೆ. ಆದರೆ, ಇಂಡಿಯನ್ ಹಜ್ ಮಿಷನ್ ಖಾತೆಗೆ ನಮ್ಮ ಹಣ ಜಮೆ ಆಗದೆ ನಾವು ದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿದ್ದೇವೆ"

"ಈ ಬಾರಿ ಐಬಾನ್ ಖಾತೆಯಿಂದಲೆ ಹಣ ಜಮೆ ಮಾಡುತ್ತೇವೆ. ಮುಂದಿನ ವರ್ಷದಿಂದ ಹೊಸ ಪದ್ಧತಿ ಅಳವಡಿಸಿಕೊಳ್ಳುವುದಾಗಿ ಸೌದಿ ಅರೇಬಿಯಾ ಸರಕಾರದ ಜೊತೆ ಮಾತುಕತೆ ನಡೆಸುವಂತೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಮನವಿ ಮಾಡುತ್ತೇವೆ. ಇಲ್ಲದಿದ್ದರೆ, ನಮಗೆ ಮೀನಾದಲ್ಲಿ ತುಂಬಾ ದೂರದ ಪ್ರದೇಶದಲ್ಲಿ ಟೆಂಟ್‍ಗಳು ಸಿಗುತ್ತವೆ. ಇದರಿಂದ ನಮಗೆ ಹಾಗೂ ಯಾತ್ರಿಗಳಿಗೆ ತುಂಬಾ ತೊಂದರೆಯಾಗುತ್ತದೆ"

ಶೌಕತ್ ಅಲಿ ಸುಲ್ತಾನ್, ಅಧ್ಯಕ್ಷರು, ಕರ್ನಾಟಕ ಹಜ್ ಆರ್ಗನೈಸರ್ಸ್ ಅಸೋಸಿಯೇಷನ್

share
-ಅಮ್ಜದ್ ಖಾನ್ ಎಂ.
-ಅಮ್ಜದ್ ಖಾನ್ ಎಂ.
Next Story
X