ಭಾರತ್ ಜೊಡೋಗೆ 1 ವರ್ಷ : ಸೆ.7ರಂದು ಜಿಲ್ಲಾ ಮಟ್ಟದ ಯಾತ್ರೆ
Photo: PTI
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ಭಾರತ್ ಜೋಡೊ ಯಾತ್ರೆʼಗೆ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸೆ. 7ರಂದು ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಯಾತ್ರೆ ನಡೆಸಲು ಪಕ್ಷ ನಿರ್ಧರಿಸಿದೆ.
ರಾಹುಲ್ ಗಾಂಧಿ ಅವರು ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಹಾಗೂ ಕಾಶ್ಮೀರದ ವರೆಗೆ ‘ಭಾರತ್ ಜೋಡೊ’ ಯಾತ್ರೆ ನಡೆಸಿದ್ದರು. ಈ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ದೇಶದ 12 ರಾಜ್ಯಗಳಲ್ಲಿ 130 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದ್ದರು. ಈ ಸಂದರ್ಭ ಪ್ರತಿ ರಾಜ್ಯದಿಂದ ಜನರು ಅವರ ಕಾಲ್ನಾಡಿಗೆ ಜಾಥಾದಲ್ಲಿ ಜೊತೆಯಾಗಿದ್ದರು.
‘ಭಾರತ್ ಜೋಡೊ ಯಾತ್ರೆ’ಗೆ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸೆ.7ರಂದು ಪ್ರತಿ ಜಿಲ್ಲೆಗಳಲ್ಲಿ ಸಂಜೆ 5ರಿಂದ 6 ಗಂಟೆ ವರೆಗೆ ‘ಭಾರತ್ ಜೋಡೊ ಯಾತ್ರೆ’ ನಡೆಸಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನೋಟಿಸು ಜಾರಿಗೊಳಿಸಿದ್ದಾರೆ ಎಂದು ವರದಿ ಹೇಳಿದೆ.
Next Story