ಬಿಎಸ್ಎಫ್ನಿಂದ 12 ಕೋ.ರೂ. ಮೌಲ್ಯದ ಮಾದಕ ವಸ್ತು ವಶ
Photo: indiatoday.in
ಕೋಲ್ಕತಾ: ಪಶ್ಚಿಮಬಂಗಾಳದ ದಕ್ಷಿಣ ದಿನಜ್ಪುರ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್)ಗುರುವಾರ 12 ಕೋ. ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆಯ ಬೆಟಾಲಿಯನ್ಗಳು ಹಾಗೂ ಕಸ್ಟಮ್ ಅಧಿಕಾರಿಗಳು ಜಂಟಿಯಾಗಿ ಈ ಪ್ರದೇಶದಲ್ಲಿ ನಿಲ್ಲಿಸಿದ್ದ ಟ್ರಕ್ನಲ್ಲಿ ಕಾರ್ಯಾಚರಣೆ ನಡೆಸಿದವು.
ಕೂಲಂಕಷ ಶೋಧ ನಡೆಸಿದ ಬಳಿಕ ಟ್ರಕ್ ಚಾಲಕ ಕ್ಯಾಬಿನ್ನಲ್ಲಿ ಕಪ್ಪು ಪ್ಲಾಸ್ಟಿಕ್ ಕೈ ಚೀಲವೊಂದು ಪತ್ತೆಯಾಯಿತು. ಈ ಚೀಲದಲ್ಲಿ 49 ಲಕ್ಷ ರೂ. ಮೌಲ್ಯದ ಯಾಬಾ ಮಾತ್ರೆಗಳು, 11 ಕೋ.ರೂ.ಗೂ ಅಧಿಕ ಮೌಲ್ಯದ 321 ಗ್ರಾಂ ಹೆರಾಯಿನ್ ಪತ್ತೆಯಾಯಿತು.
ಈ ಮಾದಕ ವಸ್ತುಗಳನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಸಾಗಾಣಿಕೆ ಮಾಡಲು ಟ್ರಕ್ನ ಒಳಗೆ ಇರಿಸಲಾಗಿತ್ತು. ಟ್ರಕ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಟ್ರಕ್ನ ಮಾಲಕರನ್ನು ಆಕಾಶ್ ಮಂಡಲ್ ಹಾಗೂ ಬಬ್ಲು ಒರವಾ ಎಂದು ಗುರುತಿಸಲಾಗಿದೆ.
Next Story