ತಮಿಳುನಾಡಿನ 12 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ಸಾಂದರ್ಭಿಕ ಚಿತ್ರ (credit: indiatoday.in)
ಚೆನ್ನೈ: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ 12 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಶ್ರೀಲಂಕಾಗೆ ಸೇರಿದ ಜಲಪ್ರದೇಶವನ್ನು ಅನುಮತಿಯಿಲ್ಲದೆ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಮೀನುಗಾರರನ್ನು ಬಂಧಿಸಲಾಗಿದೆ.
ಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾದ ನಾಗಪಟ್ಟಣಂ ಜಿಲ್ಲೆಯ ಮೀನುಗಾರರು ಸೇರಿದಂತೆ ಎಲ್ಲಾ ಮೀನುಗಾರರನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಬೇಕೆಂದು ರಾಮೇಶ್ವರಂನಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿನ ಮೀನುಗಾರರನ್ನು ಆಗಾಗ್ಗೆ ಬಂಧಿಸುವ ಮತ್ತು ಅವರ ಮೀನುಗಾರಿಕಾ ಹಡಗುಗಳನ್ನು ವಶಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ರಾಜ್ಯ ಮೀನುಗಾರಿಕೆ ಇಲಾಖೆಯ ಅಧಿಕಾರಿಯ ಪ್ರಕಾರ, ನಾಗಪಟ್ಟಣಂನ ಮೀನುಗಾರರು ನವೆಂಬರ್ 10ರಂದು ರಾತ್ರಿ ಅಕ್ಕರೈಪೆಟ್ಟೈ ಮೀನುಗಾರಿಕಾ ಬಂದರಿನಿಂದ ನೌಕಾಯಾನ ಹೊರಟಿದ್ದರು. ನವೆಂಬರ್ 11ರಂದು ಕೊಡಿಯಕರೈನ ಆಗ್ನೇಯಕ್ಕೆ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅವರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು.