ನವೆಂಬರ್ ತಿಂಗಳಲ್ಲಿ 15 ದಿನ ಬ್ಯಾಂಕ್ ರಜೆ; ಇಲ್ಲಿದೆ ಮಾಹಿತಿ
Photo Source: PTI
ಹೊಸ ದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ನವೆಂಬರ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಪಟ್ಟಿಯ ಪ್ರಕಾರ, ನವೆಂಬರ್ ತಿಂಗಳಲ್ಲಿ ಬ್ಯಾಂಕುಗಳ ಒಟ್ಟು ಹದಿನೈದು ದಿನಗಳ ಕಾಲ ಮುಚ್ಚಿರಲಿವೆ. ಈ ರಜೆಗಳು ನವೆಂಬರ್ ತಿಂಗಳ ಎಲ್ಲ ರವಿವಾರಗಳು ಹಾಗೂ ಎರಡನೆ ಮತ್ತು ನಾಲ್ಕನೆ ಶನಿವಾರಗಳ ರಜೆಯನ್ನು ಒಳಗೊಂಡಿರುತ್ತವೆ ಎಂದು ndtv.com ವರದಿ ಮಾಡಿದೆ.
ಈ ರಜೆಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿ ತಿಂಗಳೂ ಸಿದ್ಧಪಡಿಸುತ್ತದೆ. ಈ ರಜೆಗಳು ಮೂರು ಪ್ರವರ್ಗಗಳಲ್ಲಿ ಅಧಿಸೂಚನೆಗೊಳಪಡುತ್ತವೆ. ಅವೆಂದರೆ, ನೆಗೋಷಿಯಬಲ್ ಇನ್ಸುಟ್ರುಮೆಂಟ್ಸ್ ಆ್ಯಕ್ಟ್, ರಜೆಗಳು, ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್ ರಜೆ ಹಾಗೂ ಬ್ಯಾಂಕ್ ಕ್ಲೋಸಿಂಗ್ ಆಫ್ ಅಕೌಂಟ್ಸ್ ದಿನಗಳಾಗಿವೆ.
ದೀಪಾವಳಿ ಸೇರಿದಂತೆ ವಿವಿಧ ಪ್ರಾದೇಶಿಕ ಹಬ್ಬಗಳಂದೂ ಬ್ಯಾಂಕ್ ಗಳು ಕಾರ್ಯಾಚರಿಸುವುದಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಕೆಲವು ಬ್ಯಾಂಕ್ ರಜೆಗಳು ಪ್ರಾದೇಶಿಕವಾಗಿರುತ್ತವೆ ಮತ್ತು ಅವು ರಾಜ್ಯದಿಂದ ರಾಜ್ಯಕ್ಕೆ, ಬ್ಯಾಂಕ್ ನಿಂದ ಬ್ಯಾಂಕ್ ಗೆ ವಿಭಿನ್ನವಾಗಿರುವ ಸಾಧ್ಯತೆ ಇರುತ್ತದೆ.
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ/ಕುತ್/ಕರ್ವ ಚೌತ್ ಹಬ್ಬಗಳಿರುವುದರಿಂದ ಕರ್ನಾಟಕ, ಮಣಿಪುರ ಹಾಗೂ ಹಿಮಾಚಲ ಪ್ರದೇಶದಲ್ಲಿನ ಬ್ಯಾಂಕ್ ಗಳು ಕಾರ್ಯಾಚರಿಸುವುದಿಲ್ಲ.
ನವೆಂಬರ್ 10ರಂದು ವಂಗಲ ಹಬ್ಬವಿರುವುದರಿಂದ ಅಗರ್ತಲ, ಡೆಹ್ರಾಡೂನ್, ಗ್ಯಾಂಗ್ಟಕ್, ಇಂಫಾಲ್, ಕಾನ್ಪುರ ಹಾಗೂ ಲಕ್ನೊದ ಬ್ಯಾಂಕ್ ಗಳು ಮುಚ್ಚಿರುತ್ತವೆ.
ಇದಲ್ಲದೆ ಭಾರತದ ಬಹುತೇಕ ರಾಜ್ಯಗಳಲ್ಲಿ ನವೆಂಬರ್ 11-14ರವರೆಗೆ ದೀರ್ಘ ವಾರಾಂತ್ಯದ ರಜೆ ಇರಲಿದೆ.
ನವೆಂಬರ್ 15ರಂದು ಭೈದೂಜ್/ಚಿತ್ರಗುಪ್ತ ಜಯಂತಿ/ಲಕ್ಷ್ಮಿ ಪೂಜೆ (ದೀಪಾವಳಿ)/ನಿಂಗೋಲ್ ಚಕ್ಕೌಬ/ಭ್ರತ್ರಿದ್ವಿತೀಯ ಹಬ್ಬ ಇರುವುದರಿಂದ ಗ್ಯಾಂಗ್ಟಕ್, ಇಂಫಾಲ್, ಕಾನ್ಪುರ, ಕೋಲ್ಕತ್ತಾ, ಲಕ್ನೊ ಹಾಗೂ ಹಿಮಾಚಲ ಪ್ರದೇಶದಲ್ಲಿನ ಬ್ಯಾಂಕ್ ಗಳು ಕಾರ್ಯಾಚರಿಸುವುದಿಲ್ಲ.
ನವೆಂಬರ್ 20ರಂದು ಛಾತ್ ಹಬ್ಬದ ಪ್ರಯುಕ್ತ ಬಿಹಾರ್ ಹಾಗೂ ಛತ್ತೀಸ್ ಗಢದಲ್ಲಿನ ಬ್ಯಾಂಕ್ ಗಳು ಮುಚ್ಚಿರಲಿವೆ.
ನವೆಂಬರ್ 23ರಂದು ಸೆಂಗ್ ಕುತ್ಸ್ನೆಮ್/ಎಗಾಸ್-ಬಾಗ್ವಾಲ್ ಹಬ್ಬದ ಅಂಗವಾಗಿ ಉತ್ತರಾಖಂಡ ಮತ್ತು ಮಣಿಪುರದಲ್ಲಿನ ಬ್ಯಾಂಕ್ ಗಳು ಕಾರ್ಯಾಚರಿಸುವುದಿಲ್ಲ.
ನವೆಂಬರ್ 25-27ರವರೆಗೆ ನಾಲ್ಕನೆಯ ಶನಿವಾರ, ರವಿವಾರ, ಗುರುನಾನಕ್ ಜಯಂತಿ/ಕಾರ್ತಿಕ ಪೂರ್ಣಿಮೆ/ರಹಾಸ್ ಪೂರ್ಣಿಮೆ ಪ್ರಯುಕ್ತ ಬ್ಯಾಂಕ್ ಗಳಿಗೆ ದೀರ್ಘಾವಧಿಯ ವಾರಾಂತ್ಯದ ರಜೆ ಇರಲಿದೆ.
ನವೆಂಬರ್ 30ರಂದು ಕನಕದಾಸ ಜಯಂತಿಯ ಅಂಗವಾಗಿ ಕರ್ನಾಟಕದಲ್ಲಿನ ಬ್ಯಾಂಕ್ ಗಳು ಮುಚ್ಚಿರಲಿವೆ.
ಹೀಗಾಗಿ, ಗ್ರಾಹಕರು ತಮ್ಮ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಈ ವೇಳಾಪಟ್ಟಿಯಂತೆ ಯೋಜಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ಆನ್ ಲೈನ್ ಬ್ಯಾಂಕಿಂಗ್ ಹಾಗೂ ಯುಪಿಐನಂಥ ಸೌಲಭ್ಯಗಳ ಮೇಲೆ ಈ ರಜಾದಿನಗಳಲ್ಲಿ ಯಾವುದೇ ಪರಿಣಾಮವಾಗುವುದಿಲ್ಲ ಎಂಬುದನ್ನು ಗಮನಿಸಬೇಕಿದೆ.
ನವೆಂಬರ್ 2023ರ ಸಂಪೂರ್ಣ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜೆಗಳ ಪಟ್ಟಿ ಹೀಗಿದೆ:
1. ನವೆಂಬರ್ 1: ಕನ್ನಡ ರಾಜ್ಯೋತ್ಸವ /ಕರ್ವ ಚೌತ್
2. ನವೆಂಬರ್ 10: ವಂಗಲ ಹಬ್ಬ
3. ನವೆಂಬರ್ 13: ಗೋವರ್ಧನ ಪೂಜೆ/ಲಕ್ಷ್ಮಿ ಪೂಜೆ (ದೀಪಾವಳಿ)/ದಿವಾಲಿ
4. ನವೆಂಬರ್ 14: ದಿವಾಲಿ (ಬಲಿ ಪಾಡ್ಯಮಿ)/ದೀಪಾವಳಿ/ವಿಕ್ರಂ ಸಮ್ವಂತ್ ಹೊಸ ವರ್ಷ/ಲಕ್ಷ್ಮಿ ಪೂಜೆ
5. ನವೆಂಬರ್ 15: ಭೈದೂಜ್/ಚಿತ್ರಗುಪ್ತ ಜಯಂತಿ/ಲಕ್ಷ್ಮಿ ಪೂಜೆ (ದೀಪಾವಳಿ)/ನಿಂಗೋಲ್ ಚಕ್ಕೌಬಾ/ಭ್ರತ್ರಿದ್ವಿತೀಯ
6. ನವೆಂಬರ್ 20: ಛಾತ್
7. ನವೆಂಬರ್ 23: ಸೆಂಗ್ ಕುತ್ಸ್ನೆಮ್/ಎಗಾಸ್-ಬಗ್ವಾಲ್
8. ನವೆಂಬರ್ 27: ಗುರುನಾನಕ್ ಜಯಂತಿ/ಕಾರ್ತಿಕ ಪೂರ್ಣಿಮೆ/ರಹಾಸ್ ಪೂರ್ಣಿಮೆ
9. ನವೆಂಬರ್ 30: ಕನಕದಾಸ ಜಯಂತಿ