15 ಲಕ್ಷ ರೂ. ಲಂಚ ಸ್ವೀಕಾರ ಆರೋಪ: ಮಣಿಪುರದಲ್ಲಿ ಈಡಿ ಅಧಿಕಾರಿ ಬಂಧನ
ಸಾಂದರ್ಭಿಕ ಚಿತ್ರ
ಜೈಪುರ: ಹದಿನೈದು ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿ ಮಣಿಪುರದ ಇಂಫಾಲದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿ ಹಾಗೂ ಆತನ ಸಹಚರನೊಬ್ಬನನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳವು ಗುರುವಾರ ಬಂಧಿಸಿದೆ.
ಚಿಟ್ಫಂಡ್ ಪ್ರಕರಣದಲ್ಲಿ ದೂರುದಾರನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಇತ್ಯರ್ಥಪಡಿಸಿದ್ದಕ್ಕಾಗಿ ತನಗೆ 17 ಲಕ್ಷ ರೂ. ನೀಡುವಂತೆ ಆತನ ಮೇಲೆ ಆರೋಪಿ ಈ.ಡಿ. ಅಧಿಕಾರಿಯು ಒತ್ತಡ ಹೇರಿದ್ದಾರೆನ್ನಲಾಗಿದೆ.
ಇಂಫಾಲದ ಜಾರಿ ನಿರ್ದೇಶನಾಲಯ ಅನುಷ್ಠಾನ ನಿರ್ದೇಶಕ ನವಲ್ಕಿಶೋರ್ ಶರ್ಮಾ ಹಾಗೂ ಅವರ ಸ್ಥಳೀಯ ಸಹಚರ ಬಾಬುಲಾಲ್ ಮೀನಾ ಬಂಧಿತ ಆರೋಪಿಗಳಾಗಿದ್ದಾರೆ.
ನವಲ್ ಕಿಶೋರ್ ಅವರು ಜೈಪುರ ಜಿಲ್ಲೆಯ ವಿಮಲಾಪುರ ಗ್ರಾಮದ ನಿವಾಸಿಯಾಗಿದ್ದರೆ, ಅವರ ಸಹಚರನಾದ ಬಾಬುಲಾಲ್ ಮಣಿಪುರದಲ್ಲಿ ನೂತನವಾಗಿ ರಚನೆಯಾದ ಕೋಟ್ಪುಲ್ಟಿ -ಹೆಹ್ರೋರ್ ಜಿಲ್ಲೆಯ ಉಪನೋಂದಣಿಧಿಕಾರಿ ಕಚೇರಿಯಲ್ಲಿ ಕಿರಿಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ.
Next Story