ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಇಳಿಕೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ತೈಲ ಮಾರುಕಟ್ಟೆ ಕಂಪನಿಗಳು ಹೊಸದಿಲ್ಲಿ, ಮುಂಬೈ, ಕೋಲ್ಕತ್ತಾ ಹಾಗೂ ಚೆನ್ನೈನಂಥ ಮೆಟ್ರೊ ನಗರಗಳನ್ನು ಸೇರಿದಂತೆ ದೇಶಾದ್ಯಂತ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿವೆ. ಈ ಪರಿಷ್ಕರಣೆಯಿಂದ ಸಿಲಿಂಡರ್ ಗಳ ದರದಲ್ಲಿ ರೂ. 30ರಿಂದ 32ರವರೆಗೆ ಕಡಿತವಾಗಲಿದ್ದು, ಪರಿಷ್ಕೃತ ದರವು ಇಂದಿನಿಂದಲೇ ಜಾರಿಗೆ ಬಂದಿದೆ.
ಹೊಸದಿಲ್ಲಿಯ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳು ಸೇರಿದಂತೆ ವಿವಿಧ ಸಂಸ್ಥೆಗಳು ಬಳಕೆ ಮಾಡುವ ವಾಣಿಜ್ಯ ಸಿಲಿಂಡರ್ ಬೆಲೆ ಇಂದಿನಿಂದ ರೂ. 1,764.50 ಆಗಲಿದೆ. ಮಾರ್ಚ್ 1ರಂದು ಈ ದರವು ರೂ. 1,795 ಆಗಿತ್ತು.
ಮುಂಬೈನಲ್ಲಿ ರೂ. 1,749ರಿಂದ ರೂ. 1,717.50ಗೆ ದರ ತಗ್ಗಿದೆ.
ಚೆನ್ನೈನಲ್ಲಿ ರೂ. 30 ಕಡಿತಗೊಂಡಿದ್ದು, ರೂ. 1960.50 ಇದ್ದ ದರವು ರೂ. 1,930 ಆಗಿದೆ.
ಇದೇ ವೇಳೆ, ಕೋಲ್ಕತ್ತಾದಲ್ಲಿ ರೂ. 1,911 ಇದ್ದ ವಾಣಿಜ್ಯ ಸಿಲಿಂಡರ್ ದರವು ಇಂದಿನಿಂದ ರೂ. 1,879 ಆಗಿದೆ.
ಸ್ಥಳೀಯ ತೆರಿಗೆಗಳನ್ನು ಆಧರಿಸಿ ವಾಣಿಜ್ಯ ಸಿಲಿಂಡರ್ ಗಳ ದರವು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ.