ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸತ್ತಿನ ಹೊರಗೆ ಪ್ರತಿಭಟಿಸುತ್ತಿದ್ದ ಓರ್ವ ಮಹಿಳೆ ಸಹಿತ ಇಬ್ಬರು ವಶಕ್ಕೆ
Photo: NDTV
ಹೊಸದಿಲ್ಲಿ: ಲೋಕಸಭೆಯ ಕಲಾಪದ ವೇಳೆ ಭಾರೀ ಭದ್ರತಾ ಲೋಪ ಉಂಟಾಗಿದ್ದು, ಇಬ್ಬರು ವ್ಯಕ್ತಿಗಳು ಸದನದ ಬಾವಿಯೊಳಗೆ ಇಳಿದು ಸಂಸದರತ್ತ ಹಳದಿ ಗ್ಯಾಸ್ ಸಿಡಿಸಿದ್ದಾರೆ.
ದುಷ್ಕರ್ಮಿಗಳು ಹಳದಿ ಅನಿಲ ಬಿಡುತ್ತಿದ್ದಂತೆ ಸಂಸದರು ಕಟ್ಟಡದಿಂದ ಹೊರಗೆ ಓಡಿ ಬಂದಿದ್ದು, ಸಭಾಪತಿ ರಾಜೇಂದ್ರ ಅಗರ್ವಾಲ್ ಕಲಾಪವನ್ನು ಮುಂದೂಡಿದ್ದಾರೆ. ಈ ವ್ಯಕ್ತಿಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಕಚೇರಿಯಿಂದ ಪಾಸ್ ನೀಡಲಾಗಿತ್ತು ಎಂದು ಅಮ್ರೋಹಾ ಸಂಸದ ಕುನ್ವರ್ ದಾನಿಶ್ ಅಲಿ ಹೇಳಿದ್ದಾರೆ.
ಈ ನಡುವೆ, ಹಳದಿ ಹೊಗೆಯನ್ನು ಹೊರಸೂಸುವ ಕ್ಯಾನ್ಗಳನ್ನು ಬಳಸಿ ಸಂಸತ್ತಿನ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಇಬ್ಬರನ್ನು ವಶಕ್ಕೆ ಪಡಯಲಾಗಿದೆ. ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Next Story