2020ರ ದಿಲ್ಲಿ ಗಲಭೆ : ಮಾಜಿ ಕೌನ್ಸಿಲರ್, ಇತರರ ವಿರುದ್ಧ ಆರೋಪ ರೂಪಿಸಿದ ಕೋರ್ಟ್
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: 2020ರ ದಿಲ್ಲಿ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ಕೌನ್ಸಿಲರ್ ಇಷ್ರತ್ ಜಹಾನ್, ಸಾಮಾಜಿಕ ಕಾರ್ಯಕರ್ತ ಖಾಲಿದ್ ಸೈಫಿ ಮತ್ತು ಇತರ 11 ಜನರ ವಿರುದ್ಧ ಕೊಲೆ ಯತ್ನ ಮತ್ತು ದಂಗೆ ಆರೋಪಗಳನ್ನು ರೂಪಿಸಲು ಸ್ಥಳೀಯ ನ್ಯಾಯಾಲಯವು ಆದೇಶಿಸಿದೆ.
ಆದರೆ ಎಲ್ಲ 13 ಆರೋಪಿಗಳ ವಿರುದ್ಧದ ಕ್ರಿಮಿನಲ್ ಒಳಸಂಚು,ಪ್ರ ಚೋದನೆ ಮತ್ತು ಸಮಾನ ಉದ್ದೇಶ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಆರೋಪಗಳನ್ನು ನ್ಯಾಯಾಲಯವು ಕೈಬಿಟ್ಟಿದೆ.
ಪ್ರಾಸಿಕ್ಯೂಷನ್ ಪ್ರಕಾರ 2020,ಫೆ.26ರಂದು ಈಶಾನ್ಯ ದಿಲ್ಲಿಯ ಖುರೇಜಿ ಖಾಸ್ ಪ್ರದೇಶದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಲ್ಲಿಂದ ಚದುರುವಂತೆ ಗುಂಪಿಗೆ ತಿಳಿಸಿದ್ದರು. ಆದರೆ ಸ್ಥಳದಿಂದ ತೆರಳಲು ನಿರಾಕರಿಸಿದ್ದ ಗುಂಪು ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲ, ಗುಂಡು ಹಾರಾಟವನ್ನೂ ನಡೆಸಿತ್ತು.
ಇಷ್ರತ್, ಖಾಲಿದ್ ಮತ್ತು ಸಾಬು ಅನ್ಸಾರಿಯವರನ್ನು ಸ್ಥಳದಲ್ಲಿ ಬಂಧಿಸಿದ್ದ ಪೋಲಿಸರು ಇತರ ಆರೋಪಿಗಳನ್ನು ಬಳಿಕ ಬಂಧಿಸಿದ್ದರು