ಧೂಳಿನ ಬಿರುಗಾಳಿಯಿಂದ ಕನಿಷ್ಠ 205 ವಿಮಾನಗಳು ವಿಳಂಬ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Photo credit: X/@lalarvi
ಹೊಸದಿಲ್ಲಿ: ಧೂಳಿನ ಬಿರುಗಾಳಿಯಿಂದ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಗಿದೆ. ಕನಿಷ್ಠ 205 ವಿಮಾನಗಳು ವಿಳಂಬವಾಗಿವೆ ಮತ್ತು ಕನಿಷ್ಠ 50 ವಿಮಾನಗಳನ್ನು ನಿಗದಿತ ಗಮ್ಯಸ್ಥಾನದಿಂದ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ʼಧೂಳಿನ ಬಿರುಗಾಳಿ ಬಳಿಕ ಅನೇಕ ವಿಮಾನಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಕೆಲ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಅನಾನುಕೂಲತೆಯುಂಟಾಗಿದೆʼ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಈ ಬಗ್ಗೆ ಎಕ್ಸ್ನಲ್ಲಿ ಸಲಹೆಗಳನ್ನು ನೀಡಿದರೆ, ಅನೇಕ ಪ್ರಯಾಣಿಕರು ಅನಾನುಕೂಲತೆಯುಂಟಾಗಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
@airindia @MoCA_GoI @JM_Scindia Most mismanaged, misinformed world class international airport, New Delhi.#INDIRAGandhi.. worse than Bus Stand . pic.twitter.com/uDQilWIfxq
— Ärvind Lal (@lalarvi) April 12, 2025
Next Story