16ನೇ ಹಣಕಾಸು ಆಯೋಗಕ್ಕೆ 3 ಅಧಿಕಾರಿ ಮಟ್ಟದ ಹುದ್ದೆ; ಸಂಪುಟ ಅನುಮೋದನೆ
ಅರವಿಂದ ಪಂಗಾರಿಯಾ | Photo: PTI
ಹೊಸದಿಲ್ಲಿ : ಅರವಿಂದ ಪಂಗಾರಿಯಾ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗಕ್ಕೆ ನೆರವು ನೀಡಲು 3 ಅಧಿಕಾರಿ ಮಟ್ಟದ ಹುದ್ದೆಗಳನ್ನು ಸೃಷ್ಟಿಸಲು ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಜಂಟಿ ಕಾರ್ಯದರ್ಶಿ ಮಟ್ಟದ 3 ಹುದ್ದೆಗಳನ್ನು ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದು 16ನೇ ಹಣಕಾಸು ಆಯೋಗಕ್ಕೆ ಎರಡು ಜಂಟಿ ಕಾರ್ಯದರ್ಶಿಯ ಹುದ್ದೆಗಳು ಹಾಗೂ 1 ಆರ್ಥಿಕ ಸಲಹೆಗಾರರ ಹುದ್ದೆ ನೀಡಲಿದೆ.
‘‘ತನ್ನ ಕಾರ್ಯ ನಡೆಸಲು ಆಯೋಗಕ್ಕೆ ನೆರವು ನೀಡಲು ಈ ಎರಡು ನೂತನ ಹುದ್ದೆಗಳು ಅಗತ್ಯವಾಗಿದೆ’’ ಎಂದು ಹೇಳಿಕೆ ತಿಳಿಸಿದೆ.
Next Story