ಒಡಿಶಾ | ಜಾನಪದ ನಾಟಕ ಪ್ರದರ್ಶನದ ವೇಳೆ ಕಬ್ಬಿಣದ ಗೇಟ್ ಕುಸಿತ: 30ಕ್ಕೂ ಅಧಿಕ ಮಂದಿಗೆ ಗಾಯ
Photo credit: odishatv.in
ಭುವನೇಶ್ವರ್: ಒಡಿಶಾದ ಕಟಕ್ ಜಿಲ್ಲೆಯಲ್ಲಿ ಜಾನಪದ ನಾಟಕ ಪ್ರದರ್ಶನದ ಸ್ಥಳದಲ್ಲಿ ಕಬ್ಬಿಣದ ಗೇಟ್ ಕುಸಿದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲೇಪುರ ಪ್ರದೇಶದ ರೈಸುಂಗುಡಾದಲ್ಲಿ ಜಾನಪದ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಕಾರ್ಯಕ್ರಮ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ನಾಟಕ ಆರಂಭಕ್ಕೂ ಮುನ್ನ ಜನರು ಪ್ರವೇಶ ದ್ವಾರದ ಮೂಲಕ ಪ್ರವೇಶಿಸುತ್ತಿದ್ದಾಗ ಕಬ್ಬಿಣದ ಗೇಟ್ ಕುಸಿದು ಬಿದ್ದಿದೆ.
ಗಾಯಾಳುಗಳನ್ನು ಸಲೇಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಟಕ್ ನ ಎಸ್ ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಘಟನೆ ನಂತರ ನಾಟಕ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದ್ದು , ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story