ಹರ್ಯಾಣದ ಸೋನೆಪತ್ನಲ್ಲಿ 3.0 ತೀವ್ರತೆಯ ಭೂಕಂಪನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಹರ್ಯಾಣದ ಸೋನೆಪತ್ನಲ್ಲಿ ರವಿವಾರ ಬೆಳಗಿನ ಜಾವ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪನ ಸಂಭವಿಸಿದೆ.
ನಸುಕಿನ ನಾಲ್ಕು ಗಂಟೆಯ ಸುಮಾರಿಗೆ ಭೂಮಿ ನಡುಗಿದ ಅನುಭವವಾಗಿತ್ತು ಮತ್ತು ಭೂಕಂಪನದ ಕೇಂದ್ರಬಿಂದುವು ಸೋನೆಪತ್ನಲ್ಲಿ ಐದು ಕಿ.ಮೀ.ಆಳದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರವು ತಿಳಿಸಿದೆ.
ಸಂಜೆಯವರೆಗೆ ಯಾವುದೇ ಆಸ್ತಿಹಾನಿ ಅಥವಾ ಜೀವಹಾನಿ ವರದಿಯಾಗಿಲ್ಲ.
Next Story