ಗುಜರಾತ್ ನ ಕುಛ್ ನಲ್ಲಿ 3.7 ತೀವ್ರತೆಯ ಭೂಕಂಪನ
ಸಾಂದರ್ಭಿಕ ಚಿತ್ರ (PTI)
ಅಹಮದಾಬಾದ್: ಸೋಮವಾರ ಬೆಳಗ್ಗೆ ಗುಜರಾತ್ ನ ಕುಛ್ ಜಿಲ್ಲೆಯಲ್ಲಿ 3.7 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ ಹೇಳಿದೆ.
ಈ ಘಟನೆಯಲ್ಲಿ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಬೆಳಗ್ಗೆ 10.44ರ ವೇಳೆಗೆ ಭೂಕಂಪನ ದಾಖಲಾಗಿದ್ದು, ಲಖ್ಪತ್ ನ ಉತ್ತರ-ಈಶಾನ್ಯ ದಿಕ್ಕಿನಿಂದ 76 ಕಿಮೀ ದೂರದಲ್ಲಿ ಭೂಕಂಪನ ಕೇಂದ್ರ ಕಂಡು ಬಂದಿದೆ ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆ ಹೇಳಿದೆ.
ಕುಛ್ ಜಿಲ್ಲೆಯಲ್ಲಿ ಈ ತಿಂಗಳು 3ರ ತೀವ್ರತೆಯಲ್ಲಿ ಸಂಭವಿಸಿರುವ ಎರಡನೆ ಭೂಕಂಪನ ಇದಾಗಿದೆ ಎಂದು ಹೇಳಲಾಗಿದೆ.
ಭೂಕಂಪನ ಸಂಶೋಧನಾ ಸಂಸ್ಥೆ ಪ್ರಕಾರ, ಡಿಸೆಂಬರ್ 7ರಂದು ಕುಛ್ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪನ ಸಂಭವಿಸಿತ್ತು ಎನ್ನಲಾಗಿದೆ.
ಭೂಕಂಪನ ಸಂಶೋಧನಾ ಸಂಸ್ಥೆಯ ದತ್ತಾಂಶದ ಪ್ರಕಾರ, ಇದಕ್ಕೂ ಮುನ್ನ, ನವೆಂಬರ್ 15ರಂದು ಗುಜರಾತ್ ನ ಪತನ್ ನ ಉತ್ತರ ಭಾಗದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ಹೇಳಲಾಗಿದೆ.
ಗುಜರಾತ್ ಭೂಕಂಪ ಅಪಾಯ ಹೊಂದಿರುವ ಪ್ರದೇಶವಾಗಿದೆ.