ಜಮ್ಮು ಕಾಶ್ಮೀರ | ಸೇನಾ ವಾಹನ ಕಮರಿಗೆ ಬಿದ್ದು ನಾಲ್ವರು ಯೋಧರು ಮೃತ್ಯು

Photo | indiatoday.in
ಜಮ್ಮು ಕಾಶ್ಮೀರ: ಬಂಡಿಪೋರಾ ಜಿಲ್ಲೆಯಲ್ಲಿ ಶನಿವಾರ ಸೇನಾ ಟ್ರಕ್ ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಪರಿಣಾಮ ನಾಲ್ವರು ಯೋಧರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಬಂಡಿಪೋರಾ ಜಿಲ್ಲೆಯ ಸದರ್ ಕೂಟ್ ಪಯೆನ್ ಪ್ರದೇಶದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಕಮರಿಗೆ ಉರಳಿ ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಅವರಲ್ಲಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಡಿಸೆಂಬರ್ 24, 2024ರಂದು ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನವು 350 ಅಡಿ ಆಳದ ಕಮರಿಗೆ ಉರುಳಿದ ನಂತರ ಐವರು ಸೈನಿಕರು ಮೃತಪಟ್ಟು, ಐವರು ಗಾಯಗೊಂಡಿದ್ದರು. ಇದೀಗ ಮತ್ತೆ ಇಂತಹದ್ದೇ ಘಟನೆ ನಡೆದಿದೆ.
Next Story