ಆಧಾರ್-ಪಾನ್ ಜೋಡಣೆ ಮಾಡದವರಿಂದ 600 ಕೋಟಿ ರೂ. ದಂಡ ವಸೂಲಿ!

ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ನಿಗದಿತ ಸಮಯದಲ್ಲಿ ತಮ್ಮ ಪಾನ್ ಕಾರ್ಡ್ ಗಳನ್ನು ಆಧಾರ್ ನೊಂದಿಗೆ ಜೋಡಿಸಲು ವಿಫಲವಾಗಿರುವವರಿಂದ 600 ಕೋಟಿ ರೂಪಾಯಿಗೂ ಅಧಿಕ ದಂಡವನ್ನು ಕೇಂದ್ರ ಸರಕಾರ ವಸೂಲು ಮಾಡಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಸೋಮವಾರ ಲೋಕಸಭೆಗೆ ತಿಳಿಸಿದರು.
ಈಗಲೂ 11.48 ಕೋಟಿ ಪಾನ್ ಕಾರ್ಡ್ ಗಳನ್ನು ಆಧಾರ್ ಕಾರ್ಡ್ ಗಳೊಂದಿಗೆ ಜೋಡಿಸಲಾಗಿಲ್ಲ ಎಂದು ಅವರು ಹೇಳಿದರು.
‘‘ನಿಗದಿತ ಸಮಯದಲ್ಲಿ ಪಾನ್ ಕಾರ್ಡ್ ಗಳನ್ನು ಆಧಾರ್ ಕಾರ್ಡ್ ಗಳೊಂದಿಗೆ ಜೋಡಿಸಲು ವಿಫಲರಾದವರಿಂದ 2023 ಜುಲೈ 1 ಮತ್ತು 2024 ಜನವರಿ 31ರ ನಡುವಿನ ಅವಧಿಯಲ್ಲಿ ಸಂಗ್ರಹಿಸಲಾಗಿರುವ ದಂಡದ ಮೊತ್ತ 601.97 ಕೋಟಿ ರೂಪಾಯಿ’’ ಎಂದು ಸಚಿವರು ತಿಳಿಸಿದರು.
ಆಧಾರ್ ಮತ್ತು ಪಾನ್ ಕಾರ್ಡ್ ಗಳನ್ನು ಜೋಡಿಸಲು ಕೊನೆಯ ದಿನಾಂಕ 2023 ಜೂನ್ 30 ಆಗಿತ್ತು.
Next Story