ಗುಜರಾತ್ | ಭೀಕರ ರಸ್ತೆ ಅಪಘಾತ: ಐವರು ವಿದ್ಯಾರ್ಥಿಗಳ ಸಹಿತ 7 ಮಂದಿ ಮೃತ್ಯು
Photo Credit: X/@ians_india
ಅಹ್ಮದಾಬಾದ್ : ಐವರು ಕಾಲೇಜು ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಢಿಕ್ಕಿ ಹೊಡೆದು, ಇನ್ನೊಂದು ಬದಿಗೆ ಉರುಳಿ ಬಿದ್ದ ಕಾರಣ ಐವರು ವಿದ್ಯಾರ್ಥಿಗಳ ಸಹಿತ ಏಳು ಮಂದಿ ಮೃತಪಟ್ಟ ಘಟನೆ ಗುಜರಾತ್ನ ಜುನಾಗಢದಲ್ಲಿ ಸೋಮವಾರ ನಡೆದಿದೆ.
ವೇಗವಾಗಿ ಬಂದ ವಿದ್ಯಾರ್ಥಿಗಳಿದ್ದ ಕಾರು ಡಿವೈಡರ್ಗೆ ಢಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಗೆ ಪಲ್ಟಿಯಾಗಿದೆ. ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಳು ಮಂದಿಯೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಐವರು ವಿದ್ಯಾರ್ಥಿಗಳು ಕಾರಿನಲ್ಲಿ ಪರೀಕ್ಷೆಗಾಗಿ ಕಾಲೇಜಿಗೆ ತೆರಳುತ್ತಿದ್ದರೆ, ಇನ್ನಿಬ್ಬರು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರಿನಲ್ಲಿದ್ದರು ಎಂದು ತಿಳಿದು ಬಂದಿದೆ.
ಅಪಘಾತದ ಪರಿಣಾಮ ಎರಡೂ ಕಾರುಗಳು ಗುರುತು ಹಿಡಿಯಲಾಗದಷ್ಟು ಜಖಂಗೊಂಡಿವೆ.
Next Story