ಕೇರಳ | ರೆಸ್ಟೋರೆಂಟ್ ನಲ್ಲಿ ಆಹಾರ ಸೇವಿಸಿದ ಕನಿಷ್ಠ 70 ಮಂದಿ ಅಸ್ವಸ್ಥ ; ಆಸ್ಪತ್ರೆಗೆ ದಾಖಲು
ಪ್ರಸಿದ್ಧ ಖಾದ್ಯ ʼಕುಝಿಮಂದಿʼಯೊಂದಿಗೆ ನೀಡಿದ್ದ ಮಯೋನೆಸ್ ಸೇವನೆಯೇ ಕಾರಣ?
ಸಾಂದರ್ಭಿಕ ಚಿತ್ರ | PC : NDTV
ತ್ರಿಶೂರ್ : ಇಲ್ಲಿನ ಮುನ್ನೂಪೀಡಿಕ ಪ್ರದೇಶದ ರೆಸ್ಟೋರೆಂಟ್ನಿಂದ ಆಹಾರ ಸೇವಿಸಿದ ಕನಿಷ್ಠ 70 ಮಂದಿ ಫುಡ್ ಪಾಯಿಸನಿಂಗ್ ಗೆ ಒಳಗಾಗಿ ಅಸ್ವಸ್ಥರಾಗಿ, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಘಟನೆ ರವಿವಾರ ವರದಿಯಾಗಿದೆ ಎಂದು ಕೇರಳ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಿದ್ಧ ಖಾದ್ಯ ‘ಕುಝಿಮಂದಿ’ಯೊಂದಿಗೆ ಪೂರೈಸಿದ ಮಯೋನೆಸ್ ಸೇವನೆಯೇ ಅಸ್ವಸ್ಥತೆಗೆ ಕಾರಣ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಶಂಕಿಸಿದ್ದಾರೆ. ಅಸ್ವಸ್ಥರಾದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಘಟನೆಯ ನಂತರ ಆಹಾರ ಸುರಕ್ಷಾ ಅಧಿಕಾರಿಗಳು ರೆಸ್ಟೋರೆಂಟನ್ನು ಸೀಲ್ ಮಾಡಿದ್ದಾರೆ ಎಂದು ಕೈಪಮಂಗಲಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.
Next Story