ಮಕ್ಕಳ ಆರೈಕೆಗಾಗಿ ಸರಕಾರಿ ಉದ್ಯೋಗಿಗಳಿಗೆ 730 ದಿನ ರಜೆ
ಜಿತೇಂದ್ರ ಸಿಂಗ್ | Photo : PTI
ಹೊಸದಿಲ್ಲಿ: ಮಹಿಳಾ ಮತ್ತು ಪತ್ನಿಯಿಲ್ಲದ ಪುರುಷ ಸರಕಾರಿ ಅಧಿಕಾರಿಗಳು 730 ದಿನಗಳ ಮಕ್ಕಳ ಆರೈಕೆ ರಜೆ ಪಡೆಯಲು ಅರ್ಹತೆ ಹೊಂದಿದ್ದಾರೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.
‘‘ನಾಗರಿಕ ಸೇವೆಗಳು ಮತ್ತು ಕೇಂದ್ರ ಸರಕಾರದ ವ್ಯವಹಾರಗಳಿಗೆ ಸಂಬಂಧಿಸಿದ ಹುದ್ದೆಗಳಿಗೆ ನೇಮಕಗೊಳ್ಳುವ ಮಹಿಳಾ ಸರಕಾರಿ ಅಧಿಕಾರಿಗಳು ಮತ್ತು ಪತ್ನಿಯರಿಲ್ಲದ ಪುರುಷ ಸರಕಾರಿ ಅಧಿಕಾರಿಗಳು 1972ರ ಕೇಂದ್ರೀಯ ನಾಗರಿಕ ಸೇವೆಗಳ (ರಜೆ) ನಿಯಮಗಳ 43-ಸಿ ನಿಯಮದ ಪ್ರಕಾರ ತಮ್ಮ ಇಡೀ ಸೇವಾವಧಿಯಲ್ಲಿ ಮಕ್ಕಳ ಆರೈಕೆಗಾಗಿ ಗರಿಷ್ಠ 730 ದಿನಗಳ ರಜೆಯನ್ನು ಪಡೆಯಬಹುದಾಗಿದೆ.
ತಮ್ಮ ಬದುಕುಳಿದಿರುವ ಎರಡು ಹಿರಿಯ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಅವರು ಈ ರಜೆಯನ್ನು ಪಡೆಯಬಹುದಾಗಿದೆ. ಒಂದು ವೇಳೆ ಮಕ್ಕಳು ಭಿನ್ನ ಸಾಮರ್ಥ್ಯದವರಾಗಿದ್ದರೆ ಈ ಪ್ರಾಯ ಮಿತಿ ಅನ್ವಯಿಸುವುದಿಲ್ಲ’’ ಎಂದು ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.
Next Story