ರಷ್ಯಾ ಪರವಾಗಿ ಹೋರಾಡುತ್ತಲೇ ಪ್ರಾಣ ತೆತ್ತ ಹೈದರಾಬಾದ್ ಯುವಕ
ಉದ್ಯೋಗ ಕೊಡಿಸುವ ವಂಚನೆ ಜಾಲಕ್ಕೆ ಬಿದ್ದ ಭಾರತೀಯರು
Photo: Indiatoday.in
ಮಾಸ್ಕೊ : ಉದ್ಯೋಗ ಆಮಿಷಕ್ಕೆ ಬಲಿಯಾಗಿ ರಷ್ಯಾ ಸೇನೆಯ ಪರವಾಗಿ ಹೋರಾಡುವ ಒತ್ತಡಕ್ಕೆ ಸಿಲುಕಿದ್ದ ಹೈದರಾಬಾದ್ ಮೂಲದ 30 ವರ್ಷದ ವ್ಯಕ್ತಿಯೊಬ್ಬರು ಉಕ್ರೇನ್ ನೊಂದಿಗೆ ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಬಲಿಯಾಗಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಮುಹಮ್ಮದ್ ಅಸ್ಫಾನ್ ಎಂದು ಗುರುತಿಸಲಾಗಿದ್ದು, ಆ ಯುವಕನ ಕುಟುಂಬದ ಸದಸ್ಯರು ತಮ್ಮ ಪುತ್ರನನ್ನು ರಷ್ಯಾದಿಂದ ವಾಪಸ್ ಕರೆಸಲು ನೆರವು ನೀಡುವಂತೆ ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ಮೊರೆ ಹೋಗಿದ್ದರು. ಆದರೆ, ಎಐಎಂಐಎಂ ಮಾಸ್ಕೊದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯನ್ನು ಸಂಪರ್ಕಿಸಿದಾಗ, ಅಸ್ಫಾನ್ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತ ಅಸ್ಫಾನ್, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ತಿಳದು ಬಂದಿದೆ.
ಈ ಘಟನೆಯ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಕಮದಲ್ಲಿ ಪ್ರತಿಕ್ರಿಯಿಸಿರುವ ಮಾಸ್ಕೊದಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಯು, ಅಸ್ಫಾನ್ ಮೃತ ದೇಹವನ್ನು ಭಾರತಕ್ಕೆ ಮರಳಿ ಕಳಿಸಲು ಪ್ರಾಧಿಕಾರಗಳು ಆತನ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿವೆ ಎಂದು ತಿಳಿಸಿದೆ.