ಸುಲಿಗೆ ಆರೋಪ | ಎಎಪಿ ಶಾಸಕ ನರೇಶ್ ಬಲ್ಯಾನ್ ಗೆ ಪೊಲೀಸ್ ಕಸ್ಟಡಿ
ಹೊಸದಿಲ್ಲಿ: ಸುಲಿಗೆ ಆರೋಪಕ್ಕೆ ಸಂಬಂಧಿಸಿ ನಿನ್ನೆ ಬಂಧಿಸಲ್ಪಟ್ಟಿದ್ದ ಎಎಪಿ ಶಾಸಕ ನರೇಶ್ ಬಲ್ಯಾನ್ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಬಲ್ಯಾನ್ ಅವರನ್ನು ವಿಚಾರಣೆಗಾಗಿ ರೋಸ್ ಅವೆನ್ಯೂ ಕೋರ್ಟ್ ಗೆ ಕರೆತಂದ ದಿಲ್ಲಿ ಪೊಲೀಸರು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಶಾಸಕ ನರೇಶ್ ಬಲ್ಯಾನ್ ಪರ ವಕೀಲರು ಈ ಬಂಧನವನ್ನು ಅಕ್ರಮ ಎಂದು ಕೋರ್ಟ್ ನಲ್ಲಿ ವಾದಿಸಿದ್ದಾರೆ.
ಕಳೆದ ವರ್ಷ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಉತ್ತಮ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನರೇಶ್ ಬಲ್ಯಾನ್ ಅವರನ್ನು ಶನಿವಾರ ಆರ್ ಕೆ ಪುರಂ ಕ್ರೈಂ ಬ್ರಾಂಚ್ ಕಚೇರಿಗೆ ವಿಚಾರಣೆಗೆ ಕರೆಯಲಾಗಿತ್ತು. ತನಿಖೆಯ ವೇಳೆ ನರೇಶ್ ಬಲ್ಯಾನ್ ಮತ್ತು ದರೋಡೆಕೋರ ಕಪಿಲ್ ಸಾಂಗ್ವಾನ್ ನಡುವಿನ ಸಂಭಾಷಣೆ ಆಡಿಯೋ ಸಿಕ್ಕಿದೆ ಮತ್ತು ಅದರಲ್ಲಿ ಉದ್ಯಮಿಗಳ ಸುಲಿಗೆ ಬಗ್ಗೆ ಉಲ್ಲೇಖಿಸಲಾಗಿತ್ತು ಎಂದು ಹೇಳಲಾಗಿದೆ.
Next Story