ದಿಲ್ಲಿಯಲ್ಲಿ ಸರಕಾರ ಮುನ್ನಡೆಸುವ ಸಮರ್ಥ ನಾಯಕ ಬಿಜೆಪಿಯಲ್ಲಿಲ್ಲ: ಆಪ್ ಟೀಕೆ

ಆಪ್ ನಾಯಕಿ ಆತಿಶಿ (PTI)
ಹೊಸದಿಲ್ಲಿ : ದಿಲ್ಲಿ ಸರಕಾರ ರಚನೆಯಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಎಎಪಿ, ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಗೆ ವಿಶ್ವಾಸಾರ್ಹ ನಾಯಕನ ಕೊರೆತಯಿದೆ ಎಂದು ಹೇಳಿದೆ.
ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿಲ್ಲಿ ಹಂಗಾಮಿ ಮುಖ್ಯಮಂತ್ರಿ ಆತಿಶಿ, ಬಿಜೆಪಿ ಪಕ್ಷಕ್ಕೆ ದಿಲ್ಲಿಯಲ್ಲಿ ಸರಕಾರವನ್ನು ಮುನ್ನಡೆಸುವ ಸಮರ್ಥ ನಾಯಕನಿಲ್ಲ. ಚುನಾವಣೆ ಫಲಿತಾಂಶ ಪ್ರಕಟವಾಗಿ 10 ದಿನಗಳು ಕಳೆದಿವೆ. ಫೆಬ್ರವರಿ 9ರಂದು ಬಿಜೆಪಿ ಮುಖ್ಯಮಂತ್ರಿ ಮತ್ತು ಸಚಿವರ ಹೆಸರನ್ನು ಘೋಷಿಸುತ್ತದೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ತಕ್ಷಣವೇ ಪ್ರಾರಂಭಿಸುತ್ತದೆ ಎಂದು ಜನರು ಭಾವಿಸಿದ್ದರು. ಆದರೆ ದಿಲ್ಲಿಯಲ್ಲಿ ಆಡಳಿತ ನಡೆಸುವ ಸಮರ್ಥ ನಾಯಕ ಬಿಜೆಪಿಯಲ್ಲಿಲ್ಲ ಎಂದು ಆತಿಶಿ ಹೇಳಿದ್ದಾರೆ.
ದಿಲ್ಲಿಯಲ್ಲಿ ಚುನಾಯಿತರಾದ 48 ಬಿಜೆಪಿ ಶಾಸಕರಲ್ಲಿ ಯಾರನ್ನೂ ಪ್ರಧಾನಿ ನರೇಂದ್ರ ಮೋದಿ ನಂಬುವುದಿಲ್ಲ. ಬಿಜೆಪಿ ಪಕ್ಷಕ್ಕೆ ಯಾವುದೇ ದೂರದೃಷ್ಟಿ ಅಥವಾ ಆಡಳಿತದ ಯೋಜನೆ ಇಲ್ಲ. ಸರಕಾರವನ್ನು ಮುನ್ನಡೆಸುವ ಸಾಮರ್ಥ್ಯ ನಾಯಕ ಅವರಲ್ಲಿ ಇಲ್ಲದಿದ್ದರೆ, ಅವರು ಜನರಿಗಾಗಿ ಹೇಗೆ ಕೆಲಸ ಮಾಡುತ್ತಾರೆ ಎಂದು ಆತಿಶಿ ಪ್ರಶ್ನಿಸಿದ್ದಾರೆ.