ಜಿಮ್ನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಅಪಘಾತ ; ರಾಷ್ಟ್ರ ಮಟ್ಟದ ವೈಟ್ಲಿಪ್ಟರ್ ಮೃತ್ಯು

PC : NDTV
ಬಿಕೇನರ್: ಇಲ್ಲಿನ ಜಿಮ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ಸಂದರ್ಭ ರಾಷ್ಟ್ರ ಮಟ್ಟದ ವೈಟ್ ಲಿಫ್ಟರ್ ಯಸ್ಟಿಕಾ ಆಚಾರ್ಯ ಸಾವನ್ನಪ್ಪಿದ ಆಘಾತಕಾರಿ ಘಟನೆ ಬುಧವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಶ್ಟಿಕಾ ಅವರು ಜಿಮ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಅವರ ಕೈಯಿಂದ 270 ಕಿ.ಗ್ರಾಂ.ನ ಸ್ಕ್ವಾಟ್ ರಾಡ್ ಜಾರಿ ಕುತ್ತಿಗೆ ಮೇಲೆ ಬಿತ್ತು. ಇದ್ದಕ್ಕಿದ್ದಂತೆ ಭಾರವಾದ ಸ್ಕ್ವಾಟ್ ರಾಡ್ ಕುತ್ತಿಗೆ ಮೇಲೆ ಬಿದ್ದಾಗ ಅವರು ಪ್ರಜ್ಞೆ ಕಳೆದುಕೊಂಡರು.
ಕೂಡಲೇ ಸಮೀಪ ಇದ್ದ ಜಿಮ್ ತರಬೇತುದಾರ ಹಾಗೂ ಇತರರು ಅವರಿಗೆ ಶುಶ್ರೂಷೆ ನೀಡಿದರು. ಸಿಪಿಆರ್ಗೆ ಒಳಪಡಿಸಿದರು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರು ದಾರಿ ಮಧ್ಯೆಯೇ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.
ಜಿಮ್ನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಲಾಗಿದೆ. ಯಶ್ಚಿಕಾ ಸಾವಿಗೆ ಅಭ್ಯಾಸದ ಸಂದರ್ಭದ ಅಪಘಾತವೇ ಕಾರಣ ಎಂಬುದು ದೃಢವಾಗಿದೆ ಎಂದು ನಯಾ ಶಹರ್ ಪೊಲೀಸ್ ಠಾಣೆಯ ಅಧಿಕಾರಿ ವಿಕ್ರಮ್ ತಿವಾರಿ ತಿಳಿಸಿದ್ದಾರೆ.
खौफनाक VIDEO..
— NDTV India (@ndtvindia) February 19, 2025
बीकानेर में 17 वर्षीय वेटलिफ्टर यष्टिका आचार्य की मौत, ट्रेनिंग के दौरान उठा रही थी 270 किलो वजन#Bikaner । #Rajasthan pic.twitter.com/2L9UAb1Jeu
ಯಶ್ಟಿಕಾ ಅವರ ಕುಟುಂಬ ಘಟನೆಗೆ ಸಂಬಂಧಿಸಿ ಯಾವುದೇ ಪ್ರಕರಣ ದಾಖಲಿಸಿಲ್ಲ. ಅವರ ಮರಣೋತ್ತರ ಪರೀಕ್ಷೆ ನಡೆಸಲು ಬಯಸಿಲ್ಲ. ಅಂತಿಮ ಸಂಸ್ಕಾರಕ್ಕೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.