ನಟ ವಿಜಯ್ ಗೆ ವೈ ಶ್ರೇಣಿ ಭದ್ರತೆ

ನಟ, ರಾಜಕಾರಣಿ ವಿಜಯ್ (PTI)
ಚೆನ್ನೈ: ನಟ, ರಾಜಕಾರಣಿ ವಿಜಯ್ ಅವರಿಗೆ ವೈ ಶ್ರೇಣಿ ಭದ್ರತೆಯನ್ನು ಒದಗಿಸಲಾಗಿದೆ. ಈ ಭದ್ರತಾ ವ್ಯವಸ್ಥೆಯು ಇಬ್ಬರು ಎನ್ಎಸ್ಜಿ ಕಮಾಂಡೊಗಳು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಂತೆ ಎಂಟು ಮಂದಿ ಭದ್ರತಾ ಸಿಬ್ಬಂದಿಗಳನ್ನು ಹೊಂದಿರುತ್ತದೆ.
ನಿರ್ದಿಷ್ಟ ಸ್ವರೂಪದ ಜೀವ ಬೆದರಿಕೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ವೈ ಶ್ರೇಣಿ ಭದ್ರತೆಯನ್ನು ಒದಗಿಸಲಾಗುತ್ತದೆ. ಕಳೆದ ವರ್ಷವಷ್ಟೆ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಸ್ಥಾಪಿಸಿದ್ದ ವಿಜಯ್ ಅವರಿಗೆ ಮಾತ್ರ ತಮಿಳುನಾಡಿನಲ್ಲಿ ಈ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ.
ಕೇಂದ್ರ ಸರಕಾರ ಒದಗಿಸುವ ಭದ್ರತಾ ವ್ಯವಸ್ಥೆಯಲ್ಲಿ ನಾಲ್ಕು ಹಂತಗಳಿದ್ದು, ಅವನ್ನು ಎಕ್ಸ್, ವೈ, ಝೆಡ್ ಹಾಗೂ ಝೆಡ್ ಪ್ಲಸ್ ಎಂದು ವರ್ಗೀಕರಿಸಲಾಗಿದೆ. ವ್ಯಕ್ತಿಗಳಿಗಿರುವ ಅಪಾಯದ ಮಟ್ಟವನ್ನು ಆಧರಿಸಿ ಈ ಭದ್ರತಾ ಶ್ರೇಣಿಯನ್ನು ನಿರ್ಧರಿಸಲಾಗುತ್ತದೆ.
Next Story