ಅದಾನಿ-ಹಿಂಡೆನ್ಬರ್ಗ್ ಪ್ರಕರಣ: ತನಿಖೆಗೆ ಕೋರಿದ್ದ ಅರ್ಜಿಗಳ ಕುರಿತು ನಾಳೆ ಸುಪ್ರೀಂಕೋರ್ಟ್ ತೀರ್ಪು
ಅದಾನಿ ಸಮೂಹ | Photo: PTI
ಹೊಸದಿಲ್ಲಿ: ಅದಾನಿ ಸಮೂಹದ ವಿರುದ್ಧ ಅಮೆರಿಕಾ ಮೂಲದ ಕಿರು ಅವಧಿಯ ಮಾರಾಟ ಸಂಸ್ಥೆ ಹಿಂಡೆನ್ಬರ್ಗ್ ಮಾಡಿರುವ ಆರೋಪಗಳ ಕುರಿತು ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ನಾಳೆ (ಬುಧವಾರ) ತನ್ನ ತೀರ್ಪು ಪ್ರಕಟಿಸಲಿದೆ ಎಂದು indiatoday.in ವರದಿ ಮಾಡಿದೆ.
ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಳೆದ ನವೆಂಬರ್ ತಿಂಗಳಲ್ಲಿ ಕಾಯ್ದಿರಿಸಿತ್ತು.
ಭಾರತೀಯ ಭದ್ರತೆಗಳು ಹಾಗೂ ವಿನಿಮಯ ಮಂಡಳಿ (ಸೆಬಿ) ಮಧ್ಯಪ್ರದೇಶಕ್ಕೆ ಕಾರಣವಾಗಿದ್ದ ಅದಾನಿ ಸಮೂಹದ ವ್ಯಾಪಾರ ವಹಿವಾಟು ಚಟುವಟಿಕೆಗಳ ಕುರಿತು ಹಿಂಡೆನ್ಬರ್ಗ್ ರಿಸರ್ಚ್ ಮಾಡಿದ್ದ ಆರೋಪಗಳ ಬಗ್ಗೆ ಈ ಪ್ರಕರಣ ನಡೆಯುತ್ತಿದೆ.
ಮಾರ್ಚ್ ತಿಂಗಳಲ್ಲಿ, ಹಿಂಡೆನ್ಬರ್ಗ್ ವರದಿಯ ಹಿನ್ನೆಲೆಯಲ್ಲಿ ಅದಾನಿ ಸಮೂಹವೇನಾದರೂ ಭದ್ರತಾ ಕಾನೂನುಗಳನ್ನು ಉಲ್ಲಂಘಿಸಿದೆಯೆ ಎಂಬ ಕುರಿತು ತನಿಖೆ ನಡೆಸುವಂತೆ ಸೆಬಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಇದರೊಂದಿಗೆ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಎ.ಎಂ.ಸಪ್ರೆ ನೇತೃತ್ವದಲ್ಲಿ ಆರು ಸದಸ್ಯರ ತಜ್ಞರ ಸಮಿತಿಯನ್ನೂ ಸುಪ್ರೀಂಕೋರ್ಟ್ ನೇಮಿಸಿತ್ತು.