ಮುಂಬೈಯನ್ನು ಕೇಂದ್ರಾಡಳಿತವೆಂದು ಘೋಷಿಸುವಂತೆ ಹೇಳಿಕೆ: ಶಾಸಕ ಲಕ್ಷಣ್ ಸವದಿಗೆ ಆದಿತ್ಯ ಠಾಕ್ರೆ ತರಾಟೆ
ಆದಿತ್ಯ ಠಾಕ್ರೆ , ಲಕ್ಷಣ್ ಸವದಿ | PTI
ಮುಂಬೈ: ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದು ಹೇಳಿಕೆ ನೀಡಿದ ಕರ್ನಾಟಕದ ಶಾಸಕ ಲಕ್ಷಣ್ ಸವದಿ ಅವರನ್ನು ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರ ಪುತ್ರ ಹಾಗೂ ವರ್ಲಿಯ ಶಾಸಕ ಆದಿತ್ಯ ಠಾಕ್ರೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ವಿವಾದದ ನಡುವೆ, ಶಿವಸೇನೆ (ಯುಬಿಟಿ)ವಿವಾದಿತ ಪ್ರದೇಶದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡುವ ವರೆಗೆ ಅದನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿತ್ತು.
‘‘ಮಹಾರಾಷ್ಟ್ರದಿಂದ ಮುಂಬೈಯನ್ನು ಪ್ರತ್ಯೇಕಿಸುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ಮುಂಬೈ ನಮ್ಮ ತಾಯ್ನಾಡು. ಇದನ್ನು ಪಡೆಯಲು ಮರಾಠಿಗರು ತಮ್ಮ ರಕ್ಷ ಬಸಿದಿದ್ದಾರೆೆ’’ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
ಇದನ್ನು ನಿಮ್ಮ ಶಾಸಕರಿಗೆ ವಿವರಿಸಿ ಎಂದು ಆದಿತ್ಯ ಠಾಕ್ರೆ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಹೇಳಿದ್ದಾರೆ. ‘‘ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವ ಬೇಡಿಕೆ ಖಂಡನಾರ್ಹ’’ ಎಂದು ಅವರು ತಿಳಿಸಿದ್ದಾರೆ.