ಉತ್ತರಪ್ರದೇಶ | 10 ಮದರಸಾಗಳನ್ನು ಬಂದ್ ಮಾಡಿಸಿದ ಶ್ರಾವಸ್ತಿ ಜಿಲ್ಲಾಡಳಿತ

ಲಕ್ನೋ: ಶ್ರಾವಸ್ತಿ ಜಿಲ್ಲೆಯ ನೇಪಾಳ ಗಡಿ ಸಮೀಪದ 15 ಕಿಮೀ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪದಲ್ಲಿ 10 ಮಾನ್ಯತೆ ಇಲ್ಲದ ಮದರಸಾಗಳನ್ನು ಜಿಲ್ಲಾಡಳಿತ ಬಂದ್ ಮಾಡಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಧಿಕಾರಿ ದೇವೇಂದ್ರ ರಾಮ್ ಮಾತನಾಡಿ, ಶ್ರಾವಸ್ತಿಯಲ್ಲಿ ಒಟ್ಟು 297 ಮದರಸಾಗಳಿವೆ. ಶನಿವಾರ ನೇಪಾಳ ಗಡಿಯ 15 ಕಿ.ಮೀ ವ್ಯಾಪ್ತಿಯಲ್ಲಿ ಭಾರತೀಯ ಭೂಪ್ರದೇಶದಲ್ಲಿನ 10 ಮದರಸಾಗಳನ್ನು ಮುಚ್ಚಲಾಗಿದೆ. ಇವುಗಳಲ್ಲಿ ಹೆಚ್ಚಿನವು ಅಕ್ರಮವಾಗಿ ಮನೆಗಳಲ್ಲಿ ಮತ್ತು ಕೆಲವು ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಹೇಳಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಕುಮಾರ್ ದ್ವಿವೇದಿ ಅವರ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಮತ್ತು ಮಾನ್ಯತೆ ಇಲ್ಲದ ಮದರಸಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
Next Story