ದಿಲ್ಲಿಯ ಶಾಲೆಗಳು, ಆಸ್ಪತ್ರೆಯ ಬಳಿಕ ಈಗ ತಿಹಾರ್ ಜೈಲಿಗೆ ಬಾಂಬ್ ಬೆದರಿಕೆ ಇಮೇಲ್
PC : PTI
ಹೊಸದಿಲ್ಲಿ: ದಿಲ್ಲಿಯಲ್ಲಿ ಶಾಲೆಗಳು, ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ಗಳು ಬಂದಿದ್ದರೆ ಇಂದು ರಾಜಧಾನಿಯ ತಿಹಾರ್ ಜೈಲಿಗೆ ಬಾಂಬ್ ಬೆದರಿಕೆ ಬಂದಿದೆ.
ಜೈಲಿನ ಆಡಳಿತ ಈ ಬಾಂಬ್ ಬೆದರಿಕೆ ಇಮೇಲ್ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಇಂದು ಬೆಳಿಗ್ಗೆ ರಾಜಧಾನಿಯ ಜಿಟಿಬಿ ಆಸ್ಪತ್ರೆ, ದಾದಾ ದೇವ್ ಆಸ್ಪತ್ರೆ, ಹೆಡ್ಗೇವಾರ್ ಆಸ್ಪತ್ರೆ ಹಾಗೂ ದೀಪ್ ಚಂದ್ರ ಬಂಧು ಆಸ್ಪತ್ರೆಗೆ ಬಾಂಬ್ ಬೆದರಿಕೆ ಬಂದಿತ್ತು.
ಶೋಧ ಕಾರ್ಯಾಚರಣೆಯ ವೇಳೆ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲ.
Next Story