ಆಗ್ರಾ | ನಿರಂತರ ಮಳೆಯಿಂದಾಗಿ ಸೋರುತ್ತಿರುವ ತಾಜ್ಮಹಲ್
PC : PTI
ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗಿದ್ದು, ವಿಶ್ವಪ್ರಸಿದ್ಧ ತಾಜ್ಮಹಲ್ನ ಮುಖ್ಯ ಗುಮ್ಮಟದಿಂದ ನೀರು ಸೋರುತ್ತಿದೆ. ಆವರಣದಲ್ಲಿಯ ಉದ್ಯಾನವನವೂ ಜಲಾವೃತಗೊಂಡಿದೆ. ಜಲಾವೃತಗೊಂಡಿರುವ ಉದ್ಯಾನವನದ ವೀಡಿಯೊ ವೈರಲ್ ಆಗಿದ್ದು, ಪ್ರವಾಸಿಗಳ ಗಮನವನ್ನು ಸೆಳೆದಿದೆ.
ಗುಮ್ಮಟದಿಂದ ನೀರು ಸೋರುತ್ತಿದೆಯಾದರೂ ಅದಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೆ (ಎಎಸ್ಐ) ಹೇಳಿದೆ.
| The symbol of love, Taj Mahal, is flooded. The garden situated in the premises of this beautiful building is submerged. It has been raining continuously for the last 24 hours in Agra. Efforts are on to drain out the water.
— Weather monitor (@Weathermonitors) September 12, 2024
#Agra | #UttarPradesh | #india#tajmahal… https://t.co/V3YoVyg79y pic.twitter.com/iMTMWxdPv6
ಸೋರಿಕೆ ಕುರಿತು ಮಾತನಾಡಿದ ಆಗ್ರಾ ಸರ್ಕಲ್ನ ಎಎಸ್ಐನ ಮುಖ್ಯ ಅಧೀಕ್ಷಕ ರಾಜಕುಮಾರ್ ಪಟೇಲ್ ಅವರು, ‘ತಾಜ್ಮಹಲ್ನ ಮುಖ್ಯ ಗುಮ್ಮಟದಿಂದ ನೀರು ಸೋರುತ್ತಿರುವುದನ್ನು ನಾವು ನೋಡಿದ್ದೇವೆ. ನಾವು ಡ್ರೋನ್ ಕ್ಯಾಮೆರಾ ಮೂಲಕ ಮುಖ್ಯ ಗುಮ್ಮಟವನ್ನು ಪರಿಶೀಲಿಸಿದ್ದು, ಅದಕ್ಕೆ ಯಾವುದೇ ಹಾನಿಯಾಗಿಲ್ಲ ’ಎಂದು ತಿಳಿಸಿದರು.
ತಾಜ್ಮಹಲ್ ಆಗ್ರಾದ ಮತ್ತು ಇಡೀ ದೇಶದ ಹೆಮ್ಮೆಯಾಗಿದ್ದು, ಅದು ನೂರಾರು ಸ್ಥಳೀಯರಿಗೆ ಮತ್ತು ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವವರಿಗೆ ಉದ್ಯೋಗವನ್ನು ಒದಗಿಸಿದೆ. ಈ ಸ್ಮಾರಕದ ಬಗ್ಗೆ ಸೂಕ್ತ ಕಾಳಜಿಯನ್ನು ವಹಿಸಬೇಕು ಎಂದು ಸರಕಾರಿ ಅನುಮೋದಿತ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ನಿವಾಸಿ ಮೋನಿಕಾ ಶರ್ಮಾ ಹೇಳಿದರು.