ದಿಲ್ಲಿಯಲ್ಲಿ ತೀವ್ರ ಕುಸಿದ ವಾಯು ಗುಣಮಟ್ಟ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ದಿಲ್ಲಿ ರವಿವಾರ ಮಂಜಿನ ಮುಂಜಾನೆಯನ್ನು ಅನುಭವಿಸಿತು. ಕನಿಷ್ಠ ತಾಪಮಾನ 7.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಋತುಮಾನದ ಸರಾಸರಿಗಿಂತ ಎರಡು ಅಂಶ ಕಡಿಮೆ.
ವಾಯು ಗುಣಮಟ್ಟ ಸೂಚ್ಯಾಂಕ (ಎಕ್ಯುಐ) ಇಂದು 393ಕ್ಕೆ ತಲುಪಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ದತ್ತಾಂಶ ತಿಳಿಸಿದೆ.
ಆರ್ದ್ರತೆಯ ಪ್ರಮಾಣ ಬೆಳಗ್ಗೆ 8.30ಕ್ಕೆ ಶೇ. 97 ದಾಖಲಾಗಿದೆ. ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ಗೆ ತಲುಪವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಾಯು ಗುಣಮಟ್ಟ ಕುಸಿದ ಬಳಿಕ ಡಿಸೆಂಬರ್ 16ರಿಂದ ಸಂಪೂರ್ಣ ಎನ್ಸಿಆರ್ನಲ್ಲಿ ಜಿಆರ್ಎಪಿ ಹಂತ 4 ಜಾರಿಯಲ್ಲಿದೆ.
Next Story