ರಾಜ್ ಕೋಟ್ ಅಗ್ನಿ ದುರಂತದ ಬಳಿಕ ಎಚ್ಚೆತ್ತ ಗುಜರಾತ್ ಸರಕಾರ: ರಾಜ್ಯದ ಎಲ್ಲಾ 101 ಗೇಮ್ ಝೋನ್ ಗಳಿಗೆ ಬೀಗ
Photo: PTI
ಗಾಂಧಿನಗರ: ರಾಜ್ ಕೋಟ್ ಗೇಮ್ ಝೋನ್ ನಲ್ಲಿ ಸಂಭವಿಸಿದ ನಂತರ, ಗುಜರಾತ್ ನ ಎಂಟು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ 101 ಗೇಮ್ ಝೋನ್ ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಪೈಕಿ ಅಧಿಕೃತ ಪರವಾನಗಿ ಪಡೆಯದ 20 ಗೇಮ್ ಝೋನ್ ಗಳಿಗೆ ಬೀಗ ಮುದ್ರೆ ಹಾಕಿದ್ದರೆ, ಉಳಿದ 81 ಗೇಮ್ ಝೋನ್ ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರಾಜ್ ಕೋಟ್ ಗೇಮ್ ಝೋನ್ ಅಗ್ನಿ ದುರಂತದ ನಂತರ ರಾಜ್ಯಾದ್ಯಂತ ನಡೆಸಲಾಗಿರುವ ಪರಿಶೀಲನೆಯಲ್ಲಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ 101 ಗೇಮ್ ಝೋನ್ ಗಳ ಪೈಕಿ ಒಂದು ಗೇಮ್ ಝೋನ್ ಕೂಡಾ ಈವರೆಗೆ ಅಧಿಕೃತವಾಗಿ ನೋಂದಣಿಗೊಂಡಿಲ್ಲ ಎಂಬ ಸಂಗತಿ ಬಯಲಿಗೆ ಬಂದಿದೆ.
ರಾಜ್ ಕೋಟ್ ಒಂದರಲ್ಲೇ 12 ಗೇಮಿಂಗ್ ಝೋನ್ ಗಳಿಗೆ ಬೀಗ ಮುದ್ರೆ ಹಾಕಲಾಗಿದ್ದು, ಅಹಮದಾಬಾದ್ ನಲ್ಲಿ ಐದು, ಜುನಾಗಢದಲ್ಲಿ ನಾಲ್ಕು ಹಾಗೂ ಭಾವ್ ನಗರದಲ್ಲಿ ಮೂರು ಹಾಗೂ ವಡೋದರದಲ್ಲಿ 16 ಗೇಮಿಂಗ್ ಝೋನ್ ಗಳಿಗೆ ಬೀಗ ಮುದ್ರೆ ಹಾಕಲಾಗಿದೆ.
ಸರಕಾರಿ ಪ್ರಾಧಿಕಾರಗಳು ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿರುವ ಗೇಮಿಂಗ್ ಝೋನ್ ಗಳ ಪತ್ತೆಗೆ ಕ್ರಮ ಕೈಗೊಂಡಿವೆ.