ಎಲ್ಲ ವಕೀಲರು ಕಡ್ಡಾಯವಾಗಿ ತರಬೇತಿ ಪಡೆಯಬೇಕು: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ : ನ್ಯಾಯಾಧೀಶರು ತರಬೇತಿಗಾಗಿ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಗೆ ಹೋಗಬಹುದಾದರೆ ವಕೀಲರೇಕೆ ಹೋಗಬಾರದು ಎಂದು ಶುಕ್ರವಾರ ಪ್ರಶ್ನಿಸಿದ ಸರ್ವೋಚ್ಛ ನ್ಯಾಯಾಲಯವು, ಎಲ್ಲ ವಕೀಲರು ಕಡ್ಡಾಯವಾಗಿ ತರಬೇತಿಯನ್ನು ಪಡೆಯಬೇಕು ಮತ್ತು ಮಾನ್ಯತೆ ಪಡೆದ ಕಾನೂನು ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರವನ್ನು ಹೊಂದಿರದಿದ್ದರೆ ವಕಾಲತ್ ನಡೆಸಲು ಅವರಿಗೆ ಅವಕಾಶ ನೀಡಬಾರದು ಎಂದು ಒತ್ತಿ ಹೇಳಿತು.
ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಸೌವಿಕ್ ಭಟ್ಟಾಚಾರ್ಯ ಅವರ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಮತ್ತು ಪಂಕಜ ಮಿತ್ತಲ್ ಅವರ ಪೀಠವು ಈ ಹೇಳಿಕೆಯನ್ನು ನೀಡಿತು. ಸೌವಿಕ್ ಟಿಎಂಸಿ ಶಾಸಕ ಮಾಣಿಕ್ ಭಟ್ಟಾಚಾರ್ಯರ ಪುತ್ರನಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಾಣಿಕ್ ಮತ್ತು ಸೌವಿಕ್ ಇಬ್ಬರನ್ನೂ ಬಂಧಿಸಿದೆ
Next Story