ಜ್ಞಾನವಾಪಿ ಮಸೀದಿ ಆವರಣದಲ್ಲಿ ASI ಸರ್ವೆ: ಆಗಸ್ಟ್ 3ಕ್ಕೆ ತೀರ್ಪು ಕಾಯ್ದಿರಿಸಿದ ಅಲಹಾಬಾದ್ ಹೈಕೋರ್ಟ್
ಪ್ರಯಾಗ್ರಾಜ್ (ಉತ್ತರಪ್ರದೇಶ): ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜ್ಞಾನವಾಪಿ ಮಸೀದಿ ಆವರಣದಲ್ಲಿ ಕೈಗೆತ್ತಿಕೊಂಡಿರುವ ವೈಜ್ಞಾನಿಕ ಸಮೀಕ್ಷೆಯನ್ನು ವಿರೋಧಿಸಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಆಗಸ್ಟ್ 3ಕ್ಕೆ ಕಾಯ್ದಿರಿಸಿದೆ.
ಅಲ್ಲಿಯವರೆಗೆ ಸರ್ವೆ ಕಾರ್ಯಕ್ಕೆ ತಡೆ ನೀಡುವಂತೆಯೂ ಎಎಸ್ ಐಗೆ ನ್ಯಾಯಾಲಯ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಅವರು ಮಧ್ಯಾಹ್ನದ ಅವಧಿಯಲ್ಲಿ ಸರ್ವೆ ವಿಚಾರವನ್ನು ಆಲಿಸಿದರು ಹಾಗೂ ಆಗಸ್ಟ್ 3 ಕ್ಕೆ ತಮ್ಮ ತೀರ್ಪನ್ನು ಕಾಯ್ದಿರಿಸಿದರು.
Next Story