ಆಂಧ್ರಪ್ರದೇಶದ ಬಾನನ್ನು ಬೆಳಗಿದ 5,500 ಡ್ರೋನ್ಗಳು | 5 ಗಿನ್ನೆಸ್ ದಾಖಲೆ ಸೃಷ್ಟಿ
PC : X \ @RamMNK
ಅಮರಾವತಿ : ಮಂಗಳವಾರ ಸಂಜೆ ಆಂಧ್ರಪ್ರದೇಶದ ಆಗಸದಲ್ಲಿ ಹಾರಾಡಿದ ಸಾವಿರಾರು ಡ್ರೋನ್ಗಳು ರಾಷ್ಟ್ರಧ್ವಜ, ಭಗವಾನ್ ಬುದ್ಧ, ವಿಮಾನ ಮತ್ತು ಸ್ವತಃ ಒಂದು ಡ್ರೋನ್ ಸೇರಿದಂತೆ ವಿವಿಧ ರಚನೆಗಳನ್ನು ಪ್ರದರ್ಶಿಸಿ ಅದ್ಭುತ ಲೋಕವೊಂದನ್ನು ಸೃಷ್ಟಿಸಿದ್ದವು.
ಅಮರಾವತಿ ಡ್ರೋನ್ ಸಮಿಟ್ 2024ರ ಅಂಗವಾಗಿ ಕೃಷ್ಣಾ ನದಿ ದಂಡೆಯ ಪುನ್ನಮಿ(ಹುಣ್ಣಿಮೆ) ಘಾಟ್ನಲ್ಲಿ ಈ ಬೃಹತ್ ಡ್ರೋನ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಡ್ರೋನ್ ಪ್ರದರ್ಶನ ಮತ್ತು ಲೇಸರ್ ಶೋ ಕಣ್ತುಂಬಿಕೊಳ್ಳಲು ಸೇರಿದ್ದ ಸಾವಿರಾರು ಜನರಿಗೆ ಐದು ವೀಕ್ಷಣಾ ಪ್ರದೇಶಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಅತ್ಯಂತ ದೊಡ್ಡ ಗ್ರಹ, ಲ್ಯಾಂಡ್ಮಾರ್ಕ್, ವಿಮಾನ, ಧ್ವಜ ಮತ್ತು ವೈಮಾನಿಕ ಲಾಂಛನ ರಚನೆ ವಿಭಾಗಗಳಲ್ಲಿ ಐದು ಗಿನ್ನೆಸ್ ವಿಶ್ವ ದಾಖಲೆಗಳು ಈ ಪ್ರದರ್ಶನದಲ್ಲಿ ನಿರ್ಮಾಣಗೊಂಡವು.
ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರೂ ಜನರೊಂದಿಗೆ ಸೇರಿಕೊಂಡು ಡ್ರೋನ್ ಪ್ರದರ್ಶನವನ್ನು ವೀಕ್ಷಿಸಿದರು.
Thrilled to witness the spectacular Drone Air Show with 5,500 drones and cultural events at the Amaravathi Drone Summit today. Under the visionary leadership of CM @ncbn garu and PM @narendramodi ji, we’re committed to making Andhra Pradesh the Drone Capital of India and the… pic.twitter.com/vTfmHEJHWf
— Ram Mohan Naidu Kinjarapu (@RamMNK) October 22, 2024
ಎಕ್ಸ್ ಪೋಸ್ಟ್ನಲ್ಲಿ ಪ್ರದರ್ಶನದ ಸಂಘಟಕರು ಮತ್ತು ಭಾಗಿಯಾಗಿದ್ದವರನ್ನು ಅಭಿನಂದಿಸಿರುವ ಅವರು, ಅಮರಾವತಿಯನ್ನು ಡ್ರೋನ್ ರಾಜಧಾನಿ ಮತ್ತು ಆಂಧ್ರಪ್ರದೇಶವನ್ನು ಹೊಸ ಕಲ್ಪನೆಯ ಡ್ರೋನ್ಗಳ ಕೇಂದ್ರವನ್ನಾಗಿಸುವ ತನ್ನ ಕನಸನ್ನು ಹಂಚಿಕೊಂಡಿದ್ದಾರೆ.