ವಿಜಯವಾಡ- ಶ್ರೀಶೈಲಂ ನಡುವೆ ʼಸೀ ಪ್ಲೇನ್ʼ ಪ್ರಾಯೋಗಿಕ ಹಾರಾಟ ಯಶಸ್ವಿ
PC : PTI
ವಿಜಯವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ವಿಜಯವಾಡದ ಪ್ರಕಾಶಂ ಬ್ಯಾರೇಜ್ನಿಂದ ಶ್ರೀಶೈಲಂವರೆಗೆ ʼಸೀಪ್ಲೇನ್ʼ(ಜಲ ವಿಮಾನ) ಪ್ರಾಯೋಗಿಕ ಹಾರಾಟಕ್ಕೆ ಚಾಲನೆ ನೀಡಿದ್ದು, ಹಾರಾಟ ಯಶಸ್ವಿಯಾಗಿದೆ.
ಪೊಲೀಸರು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಎಸ್ಡಿಆರ್ಎಫ್ ಮತ್ತು ವಾಯುಪಡೆ ಅಧಿಕಾರಿಗಳ ಸಮ್ಮುಖದಲ್ಲಿ ಶ್ರೀಶೈಲಂನಿಂದ ವಿಜಯವಾಡಕ್ಕೆ ಸೀ ಪ್ಲೇನ್ ಪ್ರಾಯೋಗಿಕ ಹಾರಾಟ ನಡೆಸಲಾಗಿದೆ.
Water-based aviation has taken off in Andhra Pradesh! Enjoyed an inaugural seaplane journey from Vijayawada’s Prakasam Barrage to Srisailam. This flight marks a new milestone for Andhra Pradesh, adding a new dimension to our aviation landscape. The swift 45-minute service will… pic.twitter.com/t9bHhdwjPB
— N Chandrababu Naidu (@ncbn) November 9, 2024
ಈ ಕುರಿತು ಮಾತನಾಡಿದ ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು, ಸೀಪ್ಲೇನ್ ಯೋಜನೆಗಳ ಮೂಲಕ ಆರ್ಥಿಕ ಅವಕಾಶಗಳನ್ನು ಹೆಚ್ಚಿಸಲು ಮತ್ತು ಉದ್ಯೋಗವನ್ನು ಸೃಷ್ಟಿಸುವ ಗುರಿಯನ್ನು ರಾಜ್ಯ ಸರಕಾರ ಹೊಂದಿದೆ ಎಂದು ಹೇಳಿದ್ದಾರೆ. ಇದೊಂದು ಹೊಸ ಪ್ರಯೋಗ, ಇದರಿಂದ ನನಗೆ ಬಹಳ ಸಂತೋಷವಾಗಿದೆ. ದೇಶದಲ್ಲಿ ಹೊಸದೇನಾದರೂ ನಡೆದರೆ ಅದು ಅಮರಾವತಿಯಲ್ಲಿ ಆಗಬೇಕು. ಆ ಧ್ಯೇಯವಾಕ್ಯದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ರಾಜ್ಯ ಸರ್ಕಾರವು ಪ್ರವಾಸೋದ್ಯಮವನ್ನು ಉತ್ತೇಜಿಸುವತ್ತ ಗಮನ ಹರಿಸಿದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಸೀಪ್ಲೇನ್ ಯೋಜನೆ ಉತ್ತೇಜಿಸಿದ್ದಕ್ಕಾಗಿ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಚಂದ್ರ ಬಾಬು ನಾಯ್ಡು ಧನ್ಯವಾದವನ್ನು ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಆಂಧ್ರಪ್ರದೇಶದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಾಗಿದೆ. ಸೀಪ್ಲೇನ್ ಕಾರ್ಯಾಚರಣೆಗಳು ರಾಜ್ಯ ಮತ್ತು ದೇಶದ ಭವಿಷ್ಯ ಬದಲಾಯಿಸಲಿದೆ ಎಂದು ಹೇಳಿದ್ದಾರೆ.