ಸೇನೆಯ ನೂತನ ಯುದ್ಧಸಮವಸ್ತ್ರ ಮಾರಾಟ ಜಾಲ ಭೇದಿಸಿದ ಪೊಲೀಸ್-ಮಿಲಿಟರಿ ಗುಪ್ತಚರ ದಳ
Photo: ANI
ಹೊಸದಿಲ್ಲಿ: ಸೇನೆಯ ದಕ್ಷಿಣ ಕಮಾಂಡ್ ಬೇಹುಗಾರಿಕೆ ದಳ, ಪುಣೆ ಹಾಗೂ ಅಹ್ಮದ್ ನಗರದ ಭಿಂಗಾರ್ ಕ್ಯಾಂಪ್ ಪೊಲೀಸ್ ಠಾಣೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕಲಿ ಸೇನಾ ಸಮವಸ್ತ್ರಗಳನ್ನು ಮಾರಾಟ ಮಾಡುವ ಜಾಲವನ್ನು ಭೇದಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಸುಮಾರು 40 ನಕಲಿ ಸೇನಾ ಸಮವಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯು ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯವನಾಗಿದ್ದು ಆತನನ್ನು ಪ್ರಶ್ನಿಸಲಾಗುತ್ತಿದೆ. ಅಧಿಕೃತ ಪರವಾನಗಿ ಪಡೆಯದೆ ಆತ ನಕಲಿ ಯುದ್ಧ ಸಮವಸ್ತ್ರಗಳನ್ನು ಖರೀದಿಸಿ, ಮಾರಾಟ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. ಭಿಂಗಾರ್ ಕ್ಯಾಂಪ್ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ನೂತನ ಮಾದರಿ ಯುದ್ಧಸಮವಸ್ತ್ರದ ಅಕ್ರಮ ಮಾರಾಟ ಜಾಲವು ಕಾರ್ಯಾಚರಿಸುತ್ತಿದ್ದು, ಹೊಸದಿಲ್ಲಿ ಹಾಗೂ ರಾಜಸ್ತಾನ ಮೂಲದ ವ್ಯಕ್ತಿಗಳು ಅದರಲ್ಲಿ ಶಾಮೀಲಾಗಿದ್ದಾರೆಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.ಸೇನೆಯ ನೂತನ ಯುದ್ಧಸಮವಸ್ತ್ರ ಮಾರಾಟ ಜಾಲ ಭೇದಿಸಿದ ಪೊಲೀಸ್-ಮಿಲಿಟರಿ ಗುಪ್ತಚರ ದಳ
ಹೊಸದಿಲ್ಲಿ: ಸೇನೆಯ ದಕ್ಷಿಣ ಕಮಾಂಡ್ ಬೇಹುಗಾರಿಕೆ ದಳ, ಪುಣೆ ಹಾಗೂ ಅಹ್ಮದ್ ನಗರದ ಭಿಂಗಾರ್ ಕ್ಯಾಂಪ್ ಪೊಲೀಸ್ ಠಾಣೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕಲಿ ಸೇನಾ ಸಮವಸ್ತ್ರಗಳನ್ನು ಮಾರಾಟ ಮಾಡುವ ಜಾಲವನ್ನು ಭೇದಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಸುಮಾರು 40 ನಕಲಿ ಸೇನಾ ಸಮವಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯು ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯವನಾಗಿದ್ದು ಆತನನ್ನು ಪ್ರಶ್ನಿಸಲಾಗುತ್ತಿದೆ. ಅಧಿಕೃತ ಪರವಾನಗಿ ಪಡೆಯದೆ ಆತ ನಕಲಿ ಯುದ್ಧ ಸಮವಸ್ತ್ರಗಳನ್ನು ಖರೀದಿಸಿ, ಮಾರಾಟ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. ಭಿಂಗಾರ್ ಕ್ಯಾಂಪ್ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ನೂತನ ಮಾದರಿ ಯುದ್ಧಸಮವಸ್ತ್ರದ ಅಕ್ರಮ ಮಾರಾಟ ಜಾಲವು ಕಾರ್ಯಾಚರಿಸುತ್ತಿದ್ದು, ಹೊಸದಿಲ್ಲಿ ಹಾಗೂ ರಾಜಸ್ತಾನ ಮೂಲದ ವ್ಯಕ್ತಿಗಳು ಅದರಲ್ಲಿ ಶಾಮೀಲಾಗಿದ್ದಾರೆಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.