ಈಡಿಯ ಐದನೆ ಸಮನ್ಸ್ ಅನ್ನೂ ತಪ್ಪಿಸಿಕೊಂಡ ಕೇಜ್ರಿವಾಲ್
ದಿಲ್ಲಿ ಮುಖ್ಯಮಂತ್ರಿಯನ್ನು ಬಂಧಿಸುವ ತಂತ್ರವಿದು ಎಂದ ಆಪ್
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (PTI)
ಹೊಸದಿಲ್ಲಿ: ಜಾರಿ ನಿರ್ದೇಶನಾಲಯವು (ಈಡಿ) ದಿಲ್ಲಿ ಅಬಕಾರಿ ನೀತಿ ಪ್ರಕರಣದ ಸಂಬಂಧ ಜಾರಿಗೊಳಿಸಿರುವ ಐದನೆಯ ಸಮನ್ಸ್ ಗೆ ತಾನು ಹಾಜರಾಗುವುದಿಲ್ಲವೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಇಂದು ದಿಲ್ಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಮುಖ್ಯ ಕಚೇರಿಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತು.
ಇದಕ್ಕೂ ಮುನ್ನ, ಜನವರಿ 19ರಂದು ಜಾರಿಗೊಳಿಸಲಾಗಿದ್ದ ಸಮನ್ಸ್ ಅನ್ನೂ ತಪ್ಪಿಸಿಕೊಂಡಿದ್ದ ಕೇಜ್ರಿವಾಲ್, ಈ ನಡೆಯ ಹಿಂದೆ ನನ್ನನ್ನು ಬಂಧಿಸುವ ಉದ್ದೇಶ ಇದೆ ಎಂದು ಆರೋಪಿಸಿದ್ದರು.
ಈ ಹಿಂದೆ ಜಾರಿ ನಿರ್ದೇಶನಾಲಯವು ನವೆಂಬರ್ 2, ಡಿಸೆಂಬರ್ 21 ಹಾಗೂ ಜನವರಿ 3ರಂದು ಜಾರಿಗೊಳಿಸಿದ್ದ ಸಮನ್ಸ್ ಗಳಿಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರೂ ಆದ ಅರವಿಂದ್ ಕೇಜ್ರಿವಾಲ್ ಹಾಜರಾಗಿರಲಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷವು, ಈ ಸಮನ್ಸ್ ರಾಜಕೀಯ ಪ್ರೇರಿತ ಹಾಗೂ ಕಾನೂನು ಬಾಹಿರ ಎಂದು ವಾಗ್ದಾಳಿ ನಡೆಸಿದೆ.
Next Story